ಹೈದರಾಬಾದ್: ಅರ್ಧ ದಾರಿಯಲ್ಲಿ ಪೆಟ್ರೋಲ್ ಖಾಲಿಯಾಗಿ ಬೈಕ್ ನಿಲ್ಲಿಸಿದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಗುಡೂರಿನಲ್ಲಿ ನಡೆದಿದೆ.
ವಿವರಣೆಗೆ ಬರುವುದಾದರೆ, ಯುವಕನೊಬ್ಬ ಬೈಕ್ ಮೇಲೆ ಹೋಗುತ್ತಿರುವಾಗ ಗುಡೂರು ಬಳಿ ಬೈಕ್ನಲ್ಲಿದ್ದ ಪೆಟ್ರೋಲ್ ಖಾಲಿಯಾಗುತ್ತದೆ. ಈ ವೇಳೆ ಬೈಕ್ ನಿಲ್ಲಿಸಿ ಮುಂದೇನು ಮಾಡುವುದು ಅಂತಾ ಯುವಕ ಯೋಚನೆ ಮಾಡುತ್ತಿರುತ್ತಾನೆ. ಇದೇ ವೇಳೆ ಆ ಜಾಗದಲ್ಲಿ ಎರಡು ಗುಂಪುಗಳ ನಡುವೆ ಭಾರೀ ಜಗಳ ನಡೆಯುತ್ತಿರುತ್ತದೆ. ಅದರಲ್ಲಿ ಒಂದು ಗುಂಪಿನವರು ಬೈಕ್ ನಿಲ್ಲಿಸಿದ್ದ ಯುವಕ ಮತ್ತೊಂದು ಗುಂಪಿಗೆ ಸೇರಿದವನು ಅಂದುಕೊಂಡು ಆತನನ್ನು ಅಟ್ಟಾಡಿಸಿಕೊಂಡು ಹೋಗುತ್ತಾರೆ.
ಇದರಿಂದ ಭಯಭೀತನಾದ ಯುವಕ ಗುಂಪಿನಿಂದ ತಪ್ಪಿಸಿಕೊಳ್ಳಲು ಓಡುವ ಭರದಲ್ಲಿ ಪಕ್ಕದಲ್ಲೇ ಇದ್ದ ಬಾವಿಗೆ ಬೀಳುತ್ತಾನೆ. ಸ್ಥಳದಲ್ಲಿ ಬಾವಿ ಇರುವುದು ಸ್ಪಷ್ಟವಾಗಿ ತಿಳಿಯದ ಕಾರಣ ಯುವಕ ಬಾವಿ ಒಳಗೆ ಬಿದ್ದಿರುತ್ತಾನೆ. ಈಜು ಬರದೇ ಇರುವ ಪರಿಣಾಮ ಯುವಕ ಬಾವಿಯಲ್ಲೇ ಮುಳುಗಿ ಪ್ರಾಣ ಬಿಡುತ್ತಾನೆ. ಅದಕ್ಕೂ ಮುನ್ನ ಯುವಕ ಕೆಲವರು ಪೊಲೀಸರಿಗೆ ಮಾಹಿತಿ ನೀಡಿತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಯುವಕನ ದೇಹವನ್ನು ಮೆಲಕ್ಕೆತ್ತಿದ್ದರೂ ಕೂಡ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.
ಇದೀಗ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. (ಏಜೆನ್ಸೀಸ್)