ನ್ಯೂಸ್

ರಾಜರಾಜೇಶ್ವರಿ ನಗರದಲ್ಲಿ ನಾಳೆ ಸಿದ್ದರಾಮಯ್ಯ ಪ್ರಚಾರ

ಬೆಂಗಳೂರು : ಉಪ ಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಪ್ರಚಾರ ನಡೆಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಜೆ.ಪಿ.ಪಾರ್ಕ್ ಹಾಗೂ ಸಂಜೆ 4 ಗಂಟೆಗೆ ಯಶವಂತಪುರದಿಂದ ವಿವಿಧ ಪ್ರದೇಶಗಳಿಗೆ ಅಭ್ಯರ್ಥಿ ಎಚ್.ಕುಸುಮಾ ಜತೆ ತೆರಳುವ ಅವರು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು.

ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಮುನಿರತ್ನ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪ್ರಚಾರ ಸಾಕಷ್ಟು ಮಹತ್ವ ಪಡೆದುಕೊಂಡಿದೆ.