ನ್ಯೂಸ್

ಬ್ರಾಲೆಸ್​ ಆಗಿ ಸಾರ್ವಜನಿಕ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಪೂನಂ ಪಾಂಡೆ: ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪಡ್ಡೆಗಳ ಎದೆ ಝಲ್​ ಎನಿಸುವಂಥ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬ್ರಾಲೆಸ್​ ಆಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಪೂನಂ ಗುರಿಯಾಗಿದ್ದಾರೆ.

ಶನಿವಾರ ಮುಂಬೈನ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ ಅವರ ಫೋಟೋ ಮತ್ತು ವಿಡಿಯೋಗಳನ್ನು ಪಾಪರಾಜಿಗಳು ಸೆರೆಹಿಡಿದರು. ಈ ವೇಳೆ ದಾರಿಹೋಕರು ಪೂನಂ ಧರಿಸಿದ್ದ ಬಿಳಿ ಬಣ್ಣದ ಕ್ರಾಪ್​ ಟಾಪ್​ ಬಟ್ಟೆಯನ್ನು ನೋಡಿ ದಂಗಾದರು. ಅಲ್ಲದೆ, ಪೂನಂ ಜೊತೆ ಸೆಲ್ಫಿಯನ್ನು ತೆಗೆದುಕೊಂಡರು.

ಪೂನಂ ಅವರ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಪೂನಂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಕ್ರಾಪ್​ ಟಾಪ್​ನಲ್ಲಿ ಬ್ರಾಲೆಸ್​ ಆಗಿ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಪೂನಂರನ್ನು ನಿರ್ಲಜ್ಜೆ ಮಹಿಳೆ ಎಂದು ಜರಿದಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುವಾಗ ಕೊಂಚವಾದರೂ ಸಭ್ಯತೆ ಕಾಪಾಡಿ ಎಂದು ಪೂನಂಗೆ ಸಲಹೆ ನೀಡಿದ್ದಾರೆ. ನೀವು ಎಲ್ಲವನ್ನು ಬಿಟ್ಟವರು ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಕೊಂಚವಾದರೂ ಮರ್ಯಾದೆ ಉಳಿಸಿಕೊಳ್ಳಿ ಎಂದು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಸದ್ಯ ಪೂನಂ ಅವರ ವಿಡಿಯೋ ವೈರಲ್​ ಆಗಿದ್ದು, 84 ಸಾವಿರಕ್ಕೆ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. (ಏಜೆನ್ಸೀಸ್​)