ನ್ಯೂಸ್

ಅಂತಾರಾಷ್ಟ್ರೀಯ ಬಾಡಿಬಿಲ್ಡರ್​, ಮಿಸ್ಟರ್​ ಇಂಡಿಯಾ ಜಗದೀಶ್​ ಲಾಡ್​ ಕರೊನಾಗೆ ಬಲಿ

ಅಹಮದಾಬಾದ್​: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯಲ್ಲಿ ಯುವ ಸಮೂಹವೇ ಹೆಚ್ಚು ಮೃತ್ಯು ಕೂಪಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದುರ್ಬಲರು ಮಾತ್ರವಲ್ಲದೆ ಬಲಶಾಲಿಗಳು ಸಹ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ.

ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ ಮತ್ತು ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್​ ಅವರು ಕರೊನಾಗೆ ಬಲಿಯಾಗಿದ್ದಾರೆ. ಶುಕ್ರವಾರ ಗುಜರಾತ್​ನ ವಡೋದರದಲ್ಲಿ ಮೃತಪಟ್ಟ ಜಗದೀಶ್​​ ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.

ಕರೊನಾ ಸೋಂಕು ದೃಢಪಟ್ಟ ಬಳಿಕ ವಡೋದರಾ ಆಸ್ಪತ್ರೆಗೆ ದಾಖಲಾಗಿದ್ದ ಜಗದೀಶ್​ ಅವರಿಗೆ ಆಕ್ಸಿಕನ್​ ಸಪೋರ್ಟ್​ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಜಗದೀಶ್​ ಕೊನೆಯುಸಿರೆಳೆದಿದ್ದಾರೆ.

ಲ್ಯಾಡ್​ ಅವರು ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ತವರು ರಾಜ್ಯ ಮಹಾರಾಷ್ಟ್ರ ಮತ್ತು ಭಾರತವನ್ನು ಪ್ರತಿನಿಧಿಸಿದ್ದಾರೆ. (ಏಜೆನ್ಸೀಸ್​)