ನ್ಯೂಸ್

ಹಗಲು ಹೊತ್ತಲ್ಲೇ ಪಾರ್ಕಿನಲ್ಲಿ ಲೈಂಗಿಕ ದುರ್ವರ್ತನೆ ತೋರಿದ ಪೊಲೀಸ್​ ಅಧಿಕಾರಿ

ಲಂಡನ್​: ಪಾರ್ಕ್​ನಲ್ಲಿ ಕುಳಿತು ಲೈಂಗಿಕ ವರ್ತನೆ ತೋರಿದ ಪೊಲೀಸ್​ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಲಂಡನ್​ನಲ್ಲಿ ನಡೆದಿದೆ. ಅಧಿಕಾರಿಯ ದುರ್ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿ ಅವರ ಪ್ರಕರಣ ದಾಖಲಾಗಿದೆ.

ಆರೋಪಿಯು ಪೊಲೀಸ್ ಸಮುದಾಯ ಬೆಂಬಲ ಅಧಿಕಾರಿ (ಪಿಸಿಎಸ್​ಒ)ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧಿಕಾರಿ ಹೆಸರು ಕೆವಿನ್​ ಫಿಲಿಪ್ಸ್​. ಮೆಟ್‌ ರೋಡ್ಸ್​ ಮತ್ತು ಸಾರಿಗೆ ಪೋಲೀಸಿಂಗ್ ಕಮಾಂಡ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿರುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಲಂಡನ್​ ಮೆಟ್ರೋಪಾಲಿಟನ್​ ಪೊಲೀಸರು ಹೇಳಿದ್ದಾರೆ.

ಆರೋಪಿ ಕೆವಿನ್​ರನ್ನು ಶುಕ್ರವಾರ ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ವಿಡಿಯೋವೊಂದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಕೆವಿನ್​ ಹಗಲು ಹೊತ್ತಿನಲ್ಲೇ ಲಂಡನ್ ಪಾರ್ಕಿನ ಬೆಂಚ್‌ ಮೇಲೆ ಕುಳಿತು ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಈ ವಿಡಿಯೋವನ್ನು ಯಾವಾಗ? ಯಾರು? ಚಿತ್ರೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬುಧವಾರ ರಾತ್ರಿ 11.30ಕ್ಕೆ ಸ್ವಲ್ಪ ಮೊದಲು ಈ ದೃಶ್ಯಾವಳಿಗಳನ್ನು ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಮೆಟ್‌ನ ವಕ್ತಾರರು ತಿಳಿಸಿದ್ದಾರೆ.

ಮೆಟ್ಸ್ ಡೈರೆಕ್ಟರೇಟ್ ಆಫ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಪ್ರಕರಣದ ತನಿಖೆಯನ್ನು ಮುನ್ನಡೆಸುತ್ತಿದ್ದು, ಸದ್ಯ ಆರೋಪಿ ಪಿಸಿಎಸ್ಒ ಅನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. (ಏಜೆನ್ಸೀಸ್​)