ನ್ಯೂಸ್

ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ಭಾರತೀಯ ಯುವತಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

ನ್ಯೂಯಾರ್ಕ್​: ಹೈದರಾಬಾದ್​ ಮೂಲದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪ್ತಿಗೆ ಕ್ಯಾಂಪಸ್​ ಇಂಟರ್ವ್ಯೂವ್​ನಲ್ಲಿ ಜಾಕ್​ಪಾಟ್​ ಹೊಡೆದಿದೆ. ಗೌರವಾನ್ವಿತ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿಯ ಭಾರೀ ಸಂಬಳದ ಕೆಲಸವನ್ನು ದೀಪ್ತಿ ಗಿಟ್ಟಿಸಿಕೊಂಡಿದ್ದಾರೆ.‘

ಹೌದು, ದೀಪ್ತಿ ಅವರು ಅಮೆರಿಕದ ಸೀಟಲ್​ನಲ್ಲಿರುವ ಮೈಕ್ರೋಸಾಫ್ಟ್​ ಮುಖ್ಯಕಚೇರಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಆಯ್ಕೆಯಾಗಿದ್ದಾರೆ. ವಾರ್ಷಿಕವಾಗಿ ಅವರಿಗೆ 2 ಕೋಟಿ ರೂ. ಸಂಬಳ ನಿಗಧಿಯಾಗಿದೆ. ಫ್ಲೊರಿಡಾ ವಿಶ್ವವಿದ್ಯಾಲಯದಲ್ಲಿ ಎಂಎಸ್​ (ಕಂಪ್ಯೂಟರ್ಸ್​) ಪೂರ್ಣಗೊಳಿಸಿರುವ ದೀಪ್ತಿ, ಮೇ 2ರಂದು ನಡೆದ ಕ್ಯಾಂಪಸ್​ ಇಂಟರ್ವ್ಯೂವ್​ನಲ್ಲಿ ಆಯ್ಕೆಯಾಗಿದ್ದಾರೆ.

ಇದೇ ತಿಂಗಳ 17ರಿಂದ ದೀಪ್ತಿ ತನ್ನ ಕೆಲಸ ಆರಂಭಿಸಲಿದ್ದಾರೆ. ದೀಪ್ತಿ ಅವರ ತಂದೆ ಡಾ. ವೆಂಕಣ್ಣ ಅವರು ಹೈದರಾಬಾದ್​ ಪೊಲೀಸ್​ ಆಯುಕ್ತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಟೆಕ್​ ಮುಗಿದ ಬಳಿಕ ಜೆಪಿ ಮೊರ್ಗಾನ್​ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸಿದ ದೀಪ್ತಿ, ಆ ಬಳಿಕ ಎಂಎಸ್​ ಮಾಡಲು ಅಮೆರಿಕಗೆ ತೆರಳಿದರು.

ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಆಯ್ಕೆಯಾದ 300ರಲ್ಲಿ ದೀಪ್ತಿ ಅವರು ಅತಿ ಹೆಚ್ಚು ವಾರ್ಷಿಕ ವೇತನವನ್ನು ಪಡೆದಿದ್ದಾರೆ. (ಏಜೆನ್ಸೀಸ್​)