ಹೈದರಾಬಾದ್: ಮಹಾಮಾರಿ ಕರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವ ಸಮೂಹವೇ ಬಲಿಯಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಕರೊನಾ ತೀವ್ರತೆ ಹೆಚ್ಚಾಗಿದ್ದು ದಿನೇದಿನೆ ಪ್ರಕರಣಗಳ ಏರಿಕೆ ಜತೆಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ.
ಕರೊನಾಗೆ ಹೈದರಾಬಾದ್ನ ಗುಡಿ ಮಲ್ಕಾಪುರ್ ಕ್ಷೇತ್ರದ ಬಿಜೆಪಿ ಕಾರ್ಪೊರೇಟರ್ ದೇವ್ ಕರುಣಾಕರ್ ಅವರ ಮಗಳು ಭವಾನಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಮದುವೆ ಆಗಿರುವ ಭವಾನಿ ಏಪ್ರಿಲ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಕರೊನಾಗೆ ಬಲಿಯಾಗಿದ್ದಾರೆ.
ಹೆರಿಗೆಗೆ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಕರೊನಾ ಸೋಂಕು ಅಂಟಿದೆ ಎಂದು ಸಂಶಯ ವ್ಯಕ್ತವಾಗುತ್ತಿದೆ. ಸೋಂಕಿನ ತೀವ್ರತೆ ಹೆಚ್ಚಾಗಿ ಕಳೆದ 5 ದಿನಗಳಿಂದ ಭವಾನಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಅತ್ತ ಏನು ಅರಿಯದ ಹಸುಗೂಸು ಹುಟ್ಟಿದ ಬೆನ್ನಲ್ಲೇ ತಾಯಿಯನ್ನು ಕಳೆದಿಕೊಂಡಿದೆ. (ಏಜೆನ್ಸೀಸ್)