ನ್ಯೂಸ್

ನದಿಯಲ್ಲಿ ಬೇಸಿಗೆಯ ಬಿಸಿ ತಣಿಸುವಾಗ ದಿಢೀರ್​ ಪ್ರತ್ಯಕ್ಷವಾದ ಭಾರೀ ಗಾತ್ರದ ಹಾವು: ಮುಂದೇನಾಯ್ತು ನೀವೇ ನೋಡಿ

ನವದೆಹಲಿ: ಬೇಸಿಗೆಯನ್ನು ಎಂಜಾಯ್​ ಮಾಡಲು ಇರುವ ಉತ್ತಮವಾದ ದಾರಿ ಅಂದರೆ ಅದು ಸ್ವಿಮ್ಮಿಂಗ್​. ಅದು ಸ್ವಿಮ್ಮಿಂಗ್​ ಪೂಲ್​ ಆಗಿರಲಿ, ಬೀಚ್​ ಆಗಿರಲಿ ಅಥವಾ ತಾಜಾ ನದಿ ನೀರಾಗಿರಲಿ ಬೇಸಿಗೆ ಕಾಲದಲ್ಲಿನ ನೀರಾಟ ಮಜಬೂತಾಗಿರುತ್ತದೆ. ಸ್ವಿಮ್ಮಿಂಗ್​ ಮಾನವನ ಒತ್ತಡವನ್ನು ನೀಗಿಸುತ್ತದೆ. ಆದರೆ, ನೀರಿನಲ್ಲಿ ಇರುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಒಂದು ವೇಳೆ ಸ್ವಿಮ್ಮಿಂಗ್​ ಮಾಡುವಾಗ ದಿಢೀರನೇ ಭಾರೀ ಗಾತ್ರದ ಹಾವೊಂದು ಪ್ರತ್ಯಕ್ಷವಾದರೆ ಏನಾಗಬಹುದು? ಶಾಕ್​ ಅಂತೂ ಆಗೇ ಆಗುತ್ತದೆ. ಅದಕ್ಕೆ ಉದಾಹರಣೆಯೇ ಈ ವಿಡಿಯೋ.

ಕೆಲ ವಿದೇಶಿಗರು ನದಿಯಲ್ಲಿ ಸ್ವಿಮ್ಮಿಂಗ್​ ಎಂಜಾಯ್​ ಮಾಡುವಾಗ ಇದ್ದಕ್ಕಿದ್ದಂತೆ ಭಾರೀ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯುವಕನೊಬ್ಬನ ಪಕ್ಕದಲ್ಲೇ ಹಾವು ಹೋಗುತ್ತಿದ್ದರು ಆತ ಹೆದರಲಿಲ್ಲ. ಆದರೆ, ಓರ್ವ ಯುವಕ ಹಾವನ್ನು ನೋಡಿ ಓಡುವಾಗ ಹಾವು ಆತನನ್ನೇ ಹಿಂಬಾಲಿಸಿತು. ಆದರೆ, ಆತ ಹಾವಿಗೆ ಹೆದರದೆ ಸ್ವಲ್ಪ ದೂರ ನಿಂತು ಮೊಬೈಲ್​ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿದನು.

ಈ ವಿಡಿಯೋವನ್ನು ವೈಲ್ಡ್​ಸ್ಟಿಕ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈವರೆಗೆ 4.2 ಮಿಲಿಯನ್​ಗೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾವು ನೋಡಿ ಯಾರೊಬ್ಬರು ಹೆದರದಿರುವುದನ್ನು ನೋಡಿ ಬಹುಶಃ ಹಾವು ಸಾಕು ಪ್ರಾಣಿಯಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)