ನ್ಯೂಸ್

ಕ್ವಾರಂಟೈನ್​ನಲ್ಲಿದ್ದ ಕರೊನಾ ರೋಗಿಯನ್ನು ಸೆಕ್ಸ್​ಗೆ ಒತ್ತಾಯಿಸಿದ ಆಸ್ಪತ್ರೆ ಸಿಬ್ಬಂದಿ..!

ಮುಂಬೈ: ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದ ಕೋವಿಡ್​ ರೋಗಿಯನ್ನು ಮಂಚಕ್ಕೆ ಕರೆದ ವೈದ್ಯಕೀಯ ಸಂಯೋಜಕನನ್ನು ಬಂಧಿಸಿರುವ ಘಟನೆ ಮುಂಬೈನ ಅಂಧೇರಿ ಉಪನಗರದಲ್ಲಿ ಬುಧವಾರ ನಡೆದಿದೆ.

ವೈದ್ಯಕೀಯ ಸಂಯೋಜಕನ ಹಿಂಸೆಯನ್ನು ತಾಳಲಾರದೇ ಸಂತ್ರಸ್ತೆ ಸೋಮವಾರ ಮುಂಬೈ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕರೊನಾ ವೈರಸ್​ ಪಾಸಿಟಿವ್​ ಬಳಿಕ ಸಂತ್ರಸ್ತೆ ಅಂಧೇರಿಯ ಎಂಐಡಿಸಿ ಏರಿಯಾದ ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದರು. ಈ ವೇಳೆ ಆರೋಗ್ಯ ವಿಚಾರಿಸಲು ಅಲ್ಲಿಗೆ ಬರುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಲ್ಲದೆ, ಸೆಕ್ಸ್​ಗೆ ಸಹಕರಿಸು ಎಂದು ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದಾಳೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್​ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಅಪರಾಧದ ಒತ್ತಡ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ, 14 ದಿನಗಳ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)