ನ್ಯೂಸ್

ಊಟದಲ್ಲಿ ಪುರುಷರ ಮರ್ಮಾಂಗದ ತುಂಡು ಕಂಡು ಬೆಚ್ಚಿಬಿದ್ದ ಮಹಿಳೆ! ವೈರಲ್​ ಆಯ್ತು ವಿಡಿಯೋ!

ಅಕ್ರಾ: ತಿನ್ನುವ ಆಹಾರದಲ್ಲಿ ನೋಣ, ಜಿರಳೆ, ಹಲ್ಲಿ, ಇರುವೆ ಮುಂತಾದವುಗಳು ಪತ್ತೆಯಾಗುವುದು ಸಾಮಾನ್ಯ. ಆದರೆ, ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ನಡೆದಿರುವ ಒಂದು ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಹೋಟೆಲ್​ನಲ್ಲಿ ಊಟ ಮಾಡುವುದಕ್ಕೂ ಭಯ ಹುಟ್ಟಿಸುವಂತಿದೆ. ಹೀಗಾಗಿ ಊಟಕ್ಕೂ ಮುನ್ನ ಒಮ್ಮೆ ಮುಂದಿರುವ ಊಟದ ತಟ್ಟೆಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದನ್ನು ಈ ಘಟನೆ ಒತ್ತಿ ಹೇಳುತ್ತದೆ.

ಹಾಗಾದರೆ ನಡೆದಿದ್ದೇನು ಅಂತಾ ನೋಡುವುದಾದರೆ, ಘಾನಾದ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ಊಟ ಖರೀದಿಸಿದ ಮಹಿಳೆಗೆ ಅಕ್ಷರಶಃ ಶಾಕ್ ಎದುರಾಗಿತ್ತು. ಏಕೆಂದರೆ, ಊಟದಲ್ಲಿ ಪುರುಷರ ಗುಪ್ತಾಂಗದ ರೀತಿಯ ವಸ್ತು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದನ್ನು ನೋಡಿದ ನೆಟ್ಟಿಗರು ವಿಚಲಿತರಾಗಿದ್ದಾರೆ.

ಮಹಿಳೆಯು ತೌ ಝಾಫಿ ಹೆಸರಿನ ಆಹಾರ ಖಾದ್ಯವನ್ನು ಖರೀದಿಸಿದ್ದಳು. ಇದು ಘಾನಾದಲ್ಲಿ ಸಿಗುವ ಪ್ರಧಾನ ಆಹಾರವಾಗಿದೆ. ಧಾನ್ಯಗಳು ಮತ್ತು ಮಾಂಸವನ್ನು ಮಿಶ್ರಣ ಮಾಡಿ ಈ ಆಹಾರವನ್ನು ತಯಾರಿಸುತ್ತಾರೆ. ಬೀದಿಬದಿಯ ಅಂಗಡಿಗಳಲ್ಲಿ ಈ ಖಾದ್ಯ ಸುಲಭವಾಗಿ ದೊರೆಯುತ್ತದೆ. ಹೀಗಾಗಿ ಖಾದ್ಯವನ್ನು ಖರೀದಿಸಿದ ಮಹಿಳೆ ಮನೆಗೆ ಬಂದು ನೋಡಿದಾಗ ಅದರಲ್ಲಿ ಮಾನವನ ಗುಪ್ತಾಂಗ ರೀತಿಯ ವಸ್ತುವನ್ನು ನೋಡಿ ಭಯಭೀತಳಾಗಿದ್ದಾಳೆ.

ಬೀದಿಬದಿ ಆಹಾರವನ್ನು ತಂದು ತಿನ್ನುವಾಗ ಬಹಳ ಎಚ್ಚರದಿಂದಿರಿ ಎಂದು ಮಹಿಳೆ ನೆಟ್ಟಿಗರನ್ನು ಎಚ್ಚರಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್ಸ್​ ಹರಿದುಬಂದಿದ್ದು, ನಿಜಕ್ಕೂ ಇದು ಆಘಾತಕಾರಿ ಸಂಗತಿ ಎಂದು ಅಭಿಪ್ರಾಯ ವ್ಯಕ್ತವಾಗಿವೆ. ಅಲ್ಲದೆ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಎಂದು ನೆಟ್ಟಿಗರು ಮಹಿಳೆಯನ್ನು ಒತ್ತಾಯ ಮಾಡಿದ್ದಾರೆ.

ಇನ್ನು ಈ ರೀತಿಯ ಘಟನೆ ಘಾನಾದಲ್ಲಿ ಇದೇ ಮೊದಲೇನಲ್ಲ. 2016ರಲ್ಲಿ ಅಕೌಸಾ ಹೆಸರಿನ ಮಹಿಳೆಗೆ ಊಟದಲ್ಲಿ ಪುರುಷರ ಗುಪ್ತಾಂಗ ಮಾದರಿಯ ಮಾಂಸ ಪತ್ತೆಯಾಗಿತ್ತು. ಈ ಘಟನೆ ಘಾನಾ ರಾಜಧಾನಿ ಅಕ್ರಾದಲ್ಲಿ ನಡೆದಿತ್ತು. ತಕ್ಷಣ ಪೊಲೀಸರನ್ನು ಭೇಟಿ ಮಾಡಿದ್ದ ಅಕೌಸಾ, ಮಾಂಸದ ಡಿಎನ್​ಎ ಪರೀಕ್ಷೆ ಮಾಡುವಂತೆ ಕೋರಿದ್ದಳು. (ಏಜೆನ್ಸೀಸ್​)