ನ್ಯೂಸ್

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಆರೋಗ್ಯದಲ್ಲಿ ಏರುಪೇರು: ಏಮ್ಸ್​ಗೆ ದಾಖಲು

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಇಂದು (ಅ.13) ಸಂಜೆ 6.15ಕ್ಕೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​)ಗೆ ದಾಖಲಾಗಿದ್ದಾರೆ.

ಕಾಂಗ್ರೆಸ್​ ಪಕ್ಷದ ಮೂಲಗಳ ಪ್ರಕಾರ ಕಳೆದ ಎರಡು ದಿನಗಳಿಂದ ಮನಮೋಹನ್​ ಸಿಂಗ್​ ಅವರು ಸಣ್ಣ ಜ್ವರದಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮನಮೋಹನ್​ ಸಿಂಗ್​ ಅವರನ್ನು ಏಮ್ಸ್​ನ ಕಾರ್ಡಿಯೋ-ನ್ಯೂರೋ ಟವರ್​ಗೆ ಕರೆದೊಯ್ಯಲಾಗಿದ್ದು, ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಕಳೆದ ಏಪ್ರಿಲ್​ನಲ್ಲಿ ಮನಮೋಹನ್​ ಸಿಂಗ್​ ಅವರು ಕೋವಿಡ್​ ಪಾಸಿಟಿವ್​ನಿಂದಾಗಿ ಏಮ್ಸ್​ಗೆ ದಾಖಲಾಗಿ ಗುಣಮುಖರಾಗಿ ವಾಪಾಸ್ಸಾಗಿದ್ದರು. (ಏಜೆನ್ಸೀಸ್​)