ನವದೆಹಲಿ: ಆನ್ಲೈನ್ನಲ್ಲಿ ಬುಕ್ ಮಾಡಿದ ಪ್ರಾಡಕ್ಟ್ ಬದಲಾಗಿ ಬೇರೆ ಪ್ರಾಡಕ್ಟ್ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ವಿಶೇಷ ಮಾರಾಟ ನಡೆದಿತ್ತು. ಈ ವೇಳೆ ಆನ್ಲೈನ್ಲ್ಲಿ ದುಬಾರಿ ಐಫೋನ್ ಬುಕ್ ಮಾಡಿದವನಿಗೆ ಆರ್ಡರ್ ಡಿಲಿವರಿ ಬಳಿಕ ಶಾಕ್ ಆಗಿದೆ.
ಸಿಮ್ರನ್ಪಾಲ್ ಸಿಂಗ್ ಎಂಬಾತ 51,999 ರೂಪಾಯಿಗೆ ಐಫೋನ್ ಬುಕ್ ಮಾಡಿದ್ದ. ನಿಗದಿಯಂತೆ ಡಿಲಿವರಿ ಬಾಯ್ ಪಾರ್ಸೆಲ್ ಅನ್ನು ಮನೆಗೆ ತಲುಸಿದ್ದಾನೆ. ಪಾರ್ಸೆಲ್ ತೆಗೆದುಕೊಂಡ ಸಿಮ್ರನ್ಪಾಲ್ ಸಿಂಗ್ ಐಫೋನ್ ಬಂತೆಂಬ ಖುಷಿಯಿಂದ ಪ್ಯಾಕ್ ಓಪನ್ ಮಾಡುತ್ತಿದ್ದಂತೆ ಬಾಕ್ಸ್ ಒಳಗೆ 2 ಬಾರ್ ನಿರ್ಮಾ ಸೋಪ್ ನೋಡಿ ಶಾಕ್ ಆಗಿದ್ದಾರೆ.
ಸಿಮ್ರನ್ಪಾಲ್ ಸಿಂಗ್ ಮಾಡಿದ ಒಂದು ಒಳ್ಳೆ ಕೆಲಸವೆಂದರೆ ಅವರು OTP ಅನ್ನು ಡೆಲಿವರಿ ಪಾಲುದಾರರೊಂದಿಗೆ ಹಂಚಿಕೊಳ್ಳಿಲ್ಲ. ಒಂದು ವೇಳೆ ಹಂಚಿಕೊಂಡಿದ್ದರೆ, ಆರ್ಡರ್ 'ಡೆಲಿವರಿ' ಆಗಿದೆ ಎಂದು ಅಪ್‌ಡೇಟ್ ಮಾಡಲಾಗುತ್ತಿತ್ತು. ಇದಾದ ಬಳಿಕ ಫ್ಲಿಪ್‌ಕಾರ್ಟ್ ಪ್ರಮಾದವನ್ನು ಕಸ್ಟಮರ್ ಕೇರ್ ಮೂಲಕ ತಿಳಿಸಿದ್ದು, ತಪ್ಪನ್ನು ಒಪ್ಪಿಕೊಂಡಿರುವ ಫ್ಲಿಪ್‌ಕಾರ್ಟ್ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದೆ.
ಫ್ಲಿಪ್‌ಕಾರ್ಟ್ ಆದೇಶವನ್ನು ರದ್ದುಗೊಳಿಸಿದೆ ಮತ್ತು ಆರ್ಡರ್‌ಗಾಗಿ ಮರುಪಾವತಿಯನ್ನು ಆರಂಭಿಸಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)