ನ್ಯೂಸ್

ಈ ಬಾರಿಯು ಸಾಂಪ್ರದಾಯಿಕ “ಬಹಿ ಖಾತಾ” ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡಿಸಲಿರುವ ವಿತ್ತ ಸಚಿವೆ

ನವದೆಹಲಿ: ಕರೊನಾ ಸಂಕಷ್ಟದ ನಡುವೆಯೂ ಮಂಡನೆಯಾಗಲಿರುವ 2022ನೇ ಸಾಲಿನ ಬಜೆಟ್​ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್​ ಮಂಡನೆ ತುಂಬಾ ವಿಶಿಷ್ಟವಾಗಿದ್ದು, ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.

ಇಂದೆಲ್ಲ ಬಜೆಟ್​ ಪ್ರತಿಗಳಿದ್ದ ಸೂಟ್​ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್​ಕೇಸ್​ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್​ಬೈ ಹೇಳಿದ್ದ ನಿರ್ಮಲಾ ಸೀತಾರಾಮನ್​ ಸಾಂಪ್ರದಾಯಿಕ “ಬಹಿ ಖಾತಾ” ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.

ಆದರೆ, ಕಳೆದ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದ ನಿರ್ಮಲಾ ಸೀತಾರಾಮನ್​ ಬಜೆಟ್​ ಅನ್ನು ಟ್ಯಾಬ್​ ಮೂಲಕ ಮಂಡನೆ ಮಾಡಿದ್ದರು. ಈ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಿದ್ದರು. ಅಲ್ಲದೆ, ಮೊದಲ ಬಾರಿಗೆ ಕಾಗದರಹಿತ ಬಜೆಟ್​ ಮಂಡನೆ ಮಾಡಿದ ಹೆಸರಿಗೆ ಪಾತ್ರವಾಗಿದ್ದರು. ಈ ಬಾರಿಯು ಅದನ್ನೆ ಮುಂದುವರಿಸಿರುವ ನಿರ್ಮಲಾ ಸೀತಾರಾಮನ್​ ಟ್ಯಾಬ್​ ಮೂಲಕ ಬಜೆಟ್​ ಮಂಡನೆ ಮಾಡಲಿದ್ದಾರೆ. (ಏಜೆನ್ಸೀಸ್​)