ನ್ಯೂಸ್

ಸಂಗಾತಿ ಜತೆಗಿನ ಸರಸದ ವೇಳೆ ಲಂಬವಾಗಿ ಮುರಿದ ವ್ಯಕ್ತಿಯ ಮರ್ಮಾಂಗ! ವಿಶ್ವದಲ್ಲೇ ಮೊದಲ ಪ್ರಕರಣ

ಲಂಡನ್​: ಸೆಕ್ಸ್​ ಮಾಡುವ ಸಮಯದಲ್ಲಿ ವ್ಯಕ್ತಿಯೊಬ್ಬನ ಗುಪ್ತಾಂಗ ಲಂಬವಾಗಿ ಮುರಿದಿರುವ ಮೊದಲ ಪ್ರಕರಣವನ್ನು ಯುಕೆ ವೈದ್ಯರು ದಾಖಲಿಸಿದ್ದಾರೆ.

40 ವರ್ಷದ ವ್ಯಕ್ತಿಯು ತನ್ನ ಪಾಲುದಾರಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಗುದದ್ವಾರ ಮತ್ತು ಜನನಾಂಗಗಳು ನಡುವಿನ ಪೆರಿನಿಯಮ್​ ಏರಿಯಾದಲ್ಲಿ ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಯಾವು ಪೊಸಿಸನ್​ನಲ್ಲಿ ಸೆಕ್ಸ್​ ಮಾಡಿದ್ದಾರೆ ಎಂಬುದನ್ನು ವೈದ್ಯರು ತಿಳಿಸಿಲ್ಲ. ಆದರೆ, "ಶ್ವಾನ ಶೈಲಿ" ಮತ್ತು "ಮ್ಯಾನ್ ಆನ್ ಟಾಪ್" ಪೊಸಿಸನ್​ಗಳಿಂದ ಈ ರೀತಿ ಹೆಚ್ಚಾಗಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ.

ಶಿಶ್ನದಲ್ಲಿ ಯಾವುದೇ ಮೂಳೆಗಳಿಲ್ಲ, ಆದರೆ ಮನುಷ್ಯನ ಶಿಶ್ನವು ತನ್ನ ಸಂಗಾತಿಯಿಂದ ಜಾರಿಬಿದ್ದು, ಇದ್ದಕ್ಕಿದ್ದಂತೆ ಬಾಗಿದಾಗ ಇದು ಸಂಭವಿಸಬಹುದು ಮತ್ತು ನೋವಿನ ತಕ್ಕೆಗೆ ಕಾರಣವಾಗಬಹುದು ಎಂದಿದ್ದಾರೆ. ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು ಯಾರ್ಕ್ ಮೂಲದವರು ಎಂದು ಹೇಳಲಾಗಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಈ ಪ್ರಕರಣವು ವರದಿಯಾಗಿದೆ.

ಈ ಹಿಂದೆ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಶಿಶ್ನ ಮುರಿತಗಳು ಅಡ್ಡಲಾಗಿ ಸಂಭವಿಸಿವೆ. ಆದರೆ, ಇದೇ ಮೊದಲ ಬಾರಿಗೆ ಶಿಶ್ನವು ಲಂಬವಾಗಿ ಮುರಿದಿದೆ ಎಂದು ವೈದ್ಯರು ಹೇಳಿದರು. ಮುರಿತ ಸಂಭವಿಸಿದಾಗ ಯಾವುದೇ ಶಬ್ದ ಕೇಳಲಿಲ್ಲ. ಏಕೆಂದರೆ ಅಡ್ಡಲಾಗಿ ಮುರಿತಗಳಾದರೆ ಶಬ್ದ ಸಂಭವಿಸುತ್ತದೆ. ಆದರೆ. ಇದು ಲಂಬವಾಗಿರುವುದರಿಂದ ಅದು ಸಂಭವಿಸಿಲ್ಲ ಎಂದಿದ್ದಾರೆ.

ಮುರಿದ ಗಾಯದ ನಂತರ ರೋಗಿಯ ಶಿಶ್ನ ಕ್ರಮೇಣ ಊದಿಕೊಳ್ಳುತ್ತದೆ. ವೈದ್ಯರ ಚಿಕಿತ್ಸೆಯ ಆರು ತಿಂಗಳ ನಂತರ ಅದೇ ಗುಣಮಟ್ಟದ ನಿಮಿರುವಿಕೆಯನ್ನು ಸಾಧಿಸಲು ಮನುಷ್ಯನಿಗೆ ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಿಶ್ನ ಮುರಿಯುವಿಕೆಯ ಇತರ ಕಾರಣಗಳಲ್ಲಿ ಹಸ್ತಮೈಥುನ ಮತ್ತು ಮಲಗುವ ಸ್ಥಾನವು ಸೇರಿದೆ. ಶಿಶ್ನವನ್ನು ಬಲವಂತವಾಗಿ ಬಾಗಿಸುವ ಅಭ್ಯಾಸವನ್ನು ಪ್ರಾಥಮಿಕವಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು 40 ರ ಹರೆಯದ ಪುರುಷರು ಶಿಶ್ನ ಮುರಿತವನ್ನು ಅನುಭವಿಸುವ ಸಾಧ್ಯತೆಯಿದ್ದು, ಇದು 10 ಪ್ರಕರಣಗಳಲ್ಲಿ ಏಳರವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

1924 ರಿಂದ ವಿಶ್ವಾದ್ಯಂತ 1,600 ಶಿಶ್ನ ಮುರಿತ ಪ್ರಕರಣಗಳು ದಾಖಲಾಗಿವೆ. ವರ್ಷಕ್ಕೆ ಸರಿಸುಮಾರು 16 ಘಟನೆಗಳು ಸಂಭವಿಸುತ್ತಿರುತ್ತವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶೇಕಡಾ 50 ಪ್ರಕರಣಗಳಲ್ಲಿ ಮುರಿತದ ಶಬ್ದವನ್ನು ಕೇಳಬಹುದು ಎಂದು ಸಂಶೋಧಕರು ಗಮನಿಸಿದ್ದಾರೆ. (ಏಜೆನ್ಸೀಸ್​)