ನ್ಯೂಸ್

ಹೃದಯಾಘಾತದಿಂದ ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್​ವಾಲಾ ವಿಧಿವಶ ​

ಮುಂಬೈ: ಬಿಲಿಯನೇರ್ ಉದ್ಯಮಿ, ಷೇರು ವ್ಯಾಪಾರಿ ಮತ್ತು ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ (62) ಅವರು ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.45ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 1985ರಲ್ಲಿ ಕೇವಲ 5000 ರೂಪಾಯಿಗಳೊಂದಿಗೆ ರಾಕೇಶ್​ ಅವರು ಷೇರು ಮಾರುಕಟ್ಟೆಗೆ ಪ್ರವೇಶ ನೀಡಿದರು. ಸತತ ಪರಿಶ್ರಮದಿಂದ ಯಶಸ್ವಿ ಉದ್ಯಮಿ ಎನಿಸಿಕೊಂಡರು. ಇಂದು ಅವರ ಆಸ್ತಿ ಮೌಲ್ಯ ಸುಮಾರು 5.5 ಬಿಲಿಯನ್​ ಡಾಲರ್​ ಆಗಿದೆ. ಫೋರ್ಬ್ಸ್​ ಪಟ್ಟಿಯಲ್ಲೂ ರಾಕೇಶ್​ ಸ್ಥಾನ ಪಡೆದಿದ್ದರು.

ರಾಕೇಶ್ ಜುಂಜುನ್​ವಾಲಾ ಅವರು ಇತ್ತೀಚೆಗೆ ಆಗಸ್ಟ್ 7 ರಂದು ಹಾರಾಟ ನಡೆಸಿದ ಆಕಾಶ ಏರ್‌ನೊಂದಿಗೆ ವಾಯುಯಾನ ಉದ್ಯಮಕ್ಕೆ ಕಾಲಿಟ್ಟಿದ್ದರು. (ಏಜೆನ್ಸೀಸ್​)