ಕೇಂದ್ರಪರ: ಮಹಿಳೆಯೊಬ್ಬರು ಎರಡು ತಲೆ, ಮೂರು ಕೈ ಮತ್ತು ಎರಡು ಕಾಲು ಇರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಒಡಿಶಾದ ಕೇಂದ್ರಪರದಲ್ಲಿ ನಡೆದಿದೆ.
ಸಯಾಮಿ ಅವಳಿ ಹೆಣ್ಣು ಮಕ್ಕಳಾಗಿದ್ದು, ಕೇಂದ್ರಪರ ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಜನಿಸಿವೆ. ಹುಟ್ಟಿದ ಬೆನ್ನಲ್ಲೇ ಮಕ್ಕಳ ಆರೋಗ್ಯದ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರಪರ ಆಸ್ಪತ್ರೆಯ ಮಕ್ಕಳ ಸಲಹೆಗಾರ ಡಾ. ಡೆಬಸಿಶ್ ಸಾಹು, ಸಯಾಮಿ ಅವಳಿಗಳು ಅಪರೂಪದ ಜನ್ಮಜಾತ ವೈಪರೀತ್ಯವಾಗಿದೆ ಮತ್ತು ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಒಂದನೊಂದು ಸೇರಿಕೊಂಡಿದ್ದು, ಸದ್ಯ ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಮಕ್ಕಳ ಅಲ್ಟ್ರಾಸೌಂಡ್ ಪರೀಕ್ಷೆಯ ಬಳಿಕ ಅಸಹಜತೆ ಹುಟ್ಟಿನ ವಿವರಗಳನ್ನು ತಿಳಿಯಲಾಗುವುದು ಎಂದು ವೈದ್ಯರು ಹೇಳಿದರು. ಸದ್ಯ ಮಕ್ಕಳ ಮೇಲೆ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್)