ನ್ಯೂಸ್

VIDEO| ಡಾನ್ಸ್​ ಮಾಡುತ್ತಲೇ ಪುಟ್ಟ ಬಾಲಕನ ಮೇಲೆ ಬಿದ್ದ ದಡೂತಿ ಮಹಿಳೆ! ಮುಂದೇನಾಯ್ತು ನೀವೇ ನೋಡಿ...

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರು ಪಾರ್ಟಿ ಒಂದರಲ್ಲಿ ಹರಿಯಾಣದ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಮಹಿಳೆಯರ ಮಧ್ಯೆ ಪುಟ್ಟ ಬಾಲಕನೊಬ್ಬನು ಡಾನ್ಸ್​ ಮಾಡುತ್ತಿರುತ್ತಾನೆ. ಹಿಂದೆ ಬಾಲಕನಿರುವುದನ್ನು ಗಮನಿಸದೇ ಓರ್ವ ಮಹಿಳೆ ಡಾನ್ಸ್​ ಮಾಡುತ್ತಾ ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ ಅಡ್ಡಬಂದ ಬಾಲಕನ ಮೇಲೆ ಬೀಳುತ್ತಾಳೆ. ತಕ್ಷಣ ಅಲ್ಲಿದ್ದ ಇತರರು ಮಹಿಳೆಯನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿ ಮಗುವನ್ನು ಎತ್ತಿಕೊಳ್ಳುತ್ತಾರೆ. ಮೊದಲೇ ಮಹಿಳೆ ತುಂಬಾ ದಪ್ಪಗಿದ್ದರಿಂದ ಬಿದ್ದ ರಭಸಕ್ಕೆ ನೋವಾಗಿ ಮಗು ಅಳುತ್ತಿರುವುದು ವಿಡಿಯೋದಲ್ಲಿದೆ.

ಈ ವಿಡಿಯೋವನ್ನು ಪಟಿಯಾಲೆ ವಾಲೆ ಚಾಚಾ ಜಿ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. 30 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)