ನ್ಯೂಸ್

'ಇದೇನು ಬಿನ್ ಲಾಡೆನ್ ಸರ್ಕಾರಾನಾ…?'; ಕಾಂಗ್ರೆಸ್​​​​ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಆರ್.‌ಅಶೋಕ್​​​​​​

ಬೆಂಗಳೂರು: ರಾಜ್ಯ ಸರ್ಕಾರ ಏಕಾಏಕಿ ಬಿಬಿಎಂಪಿ ಗುತ್ತಿಗಾದಾರರ ಬಿಲ್ ಕೊಡುತ್ತಿಲ್ಲ. ಎರಡು ತಿಂಗಳಿನಿಂದ ಯಾವುದೇ ನಿವೇಶನಗಳಲ್ಲಿ‌ ಮನೆಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಂಜೂರಾತಿ ಕೊಟ್ಟಿಲ್ಲ. ಇದರ ಗೂಡಾರ್ಥವೇನು? ಎಂದು ಮಾಜಿ ಡಿಸಿಎಂ ಆರ್.‌ಅಶೋಕ್​​​​​​ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇಂದು ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.‌ಅಶೋಕ್​​​​​​, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡ್ತಾರೆ ಎಂದು ಅಮಿತ್ ಶಾ ಹೇಳಿದ್ದರು. ಅದು ಈಗ ನಿಜವಾಗಿದೆ. ಈಗ ಅಧಿಕಾರದಲ್ಲಿರುವವರು ಪೇ ಸಿಎಂ- ಡಿಸಿಎಂ?. ಈ ಗುತ್ತಿಗೆದಾರರು ನಿಮ್ಮ ವಿಶ್ವವಿದ್ಯಾಲಯದಲ್ಲಿ ಓದಿ ಪಿಎಚ್​​​​ಡಿ ಮಾಡಿದವರೇ ಎಂದು ಟೀಕಿಸಿದರು.

ಕಳೆದ 2 ತಿಂಗಳಿನಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಗುತ್ತಿಗೆದಾರರು ಮಾಡಿರುವ ಕೆಲಸಗಳಿಗೆ ಶೇ.15 ರಷ್ಟು ಕಮಿಷನ್ ಕೇಳುತ್ತಿರುವುದು ಸರಿಯೇ, ಇದೇನು ಬಿನ್ ಲಾಡೆನ್ ಸರ್ಕಾರನಾ ಎಂದು ಆರ್ ಅಶೋಕ್ ತರಾಟೆಗೆ ತೆಗೆದುಕೊಂಡರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬೈರತಿ ಬಸವರಾಜು, ಸತೀಶ ರೆಡ್ಡಿ, ಉದಯ ಗರುಡಾಚಾರ, ರಾಮಮೂರ್ತಿ ಸೇರಿದಂತೆ ಅನೇಕರು ಇದ್ದರು.