ಮುಂಬೈ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಇದೀಗ ಇನಾಯಾ ಸುಲ್ತಾನರೊಂದಿಗೆ ವರ್ಮಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ವರ್ಮಾ ಗುರಿಯಾಗಿದ್ದಾರೆ.
ವರ್ಮಾ ಅವರ ವಿಡಿಯೋವನ್ನು ಹೊಲಸಾದ, ಅತ್ಯಂತ ಕಳಪೆ ಮತ್ತು ಅಶ್ಲೀಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ವಿಡಿಯೋ ವಿಚಾರಕ್ಕೆ ಬರುವುದಾದರೆ, ಇಬ್ಬರು ಯಾವುದೋ ಒಂದು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಇದಾಗಿದೆ. ವಿಡಿಯೋವನ್ನು ರಾಮ್ ಗೋಪಾಲ್ ವರ್ಮಾ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಇನಾಯಾ ಸುಲ್ತಾನರ ಅನ್ವೆರಿಫೈಡ್ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.
ಎಲ್ಲವನ್ನು ಒಪ್ಪಿಗೆಯಿಂದಲೇ ಮಾಡಿದರೆ ಸಮಸ್ಯೆಯಿಲ್ಲ, ಇಲ್ಲವಾದರೆ ಇದು ಅಪರಾಧ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಹೀಗೆ ಅನೇಕ ನೆಟ್ಟಿಗರು ವರ್ಮಾ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮೂಲಕ ವರ್ಮಾ ಸ್ಪಷ್ಟನೆಯನ್ನು ನೀಡಿದ್ದಾರೆ. ಎಂದಿನಂತೆ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿರುವ ವರ್ಮಾ, ಹಲೋ ಗಯ್ಸ್ ಈ ವಿಡಿಯೋದಲ್ಲಿರುವುದು ನಾನಲ್ಲ ಮತ್ತು ಕೆಂಪುಡುಗೆಯಲ್ಲಿರುವುದು ಇನಾಯಾಳಲ್ಲ ಎಂದು ಮತ್ತೊಮ್ಮೆ ನಾನು ಸ್ಪಷ್ಟಪಡಿಸುತ್ತೇನೆ. ನನ್ನಾಣೆಗೂ ವಿಡಿಯೋದಲ್ಲಿರುವುದು ಅಮರಿಕ ಅಧ್ಯಕ್ಷ ಜೋ ಬೈಡೆನ್ ಎಂದಿದ್ದಾರೆ.
ವರ್ಮಾ ಟ್ವೀಟ್ ವಿರುದ್ಧವೂ ಕಿಡಿಕಾರಿರುವ ನೆಟ್ಟಿಗರು, ಅದು ಡ್ಯಾನ್ಸ್ ಮಾಡುವ ವಿಡಿಯೋ ಆಗಿರಲಿಲ್ಲ ಆದರೆ ನೀವೆಲ್ಲರೂ ಅವಳ ಮೇಲೆ ಹೋಗುವ ಒಂದು ನಯವಾದ ಕ್ರಿಯೆಯಾಗಿತ್ತು. ನೀವು ತುಂಬಾ ಕುಡಿದಿರುವುದನ್ನು ನಾವು ನೋಡಬಹುದು. ಇದು ಭಯಂಕರವಾಗಿತ್ತು ಎಂದಿದ್ದಾರೆ. (ಏಜೆನ್ಸೀಸ್)