ನ್ಯೂಸ್

ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್​ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!

ಚೆನ್ನೈ: ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಕಾಲಿವುಡ್​ನಲ್ಲಿ ಒಳ್ಳೆಯ ಹೆಸರು ಮಾಡಿರುವ ಆಂಡ್ರಿಯಾ ಜರೆಮಿಯ ಇದೀಗ ಮಸ್ಕಿನ್​ ನಿರ್ದೇಶನದ ವಾಂಪೈರ್​-2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿಜಯ್​ ಸೇತುಪತಿ, ಪೂರ್ಣಾ ಹಾಗೂ ಸಂತೋಷ್​ ಪ್ರತಾಪ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಮುರುಗನಾಥಂ ವಾಂಪೈರ್​ ಚಿತ್ರದ ಮುಂದುವರಿದ ಭಾಗವಾಗಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

ಚಿತ್ರತಂಡ ಇತ್ತೀಚೆಗೆ ಟೀಸರ್​ ಬಿಡುಗಡೆ ಮಾಡಿದ್ದು, ಮುಖ್ಯ ಪಾತ್ರದಲ್ಲಿ ನಟಿಸಿರುವ ಆಂಡ್ರಿಯಾ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರನ್ನೂ ಭಯಭೀತರಾಗಿಸಿದ್ದಾರೆ. ಆದಾಗ್ಯೂ ಈ ಚಿತ್ರದ ಬಗ್ಗೆ ವದಂತಿಯೊಂದ ಹರಿದಾಡುತ್ತಿದೆ. ಈ ಚಿತ್ರದಲ್ಲಿ 15 ನಿಮಿಷಗಳ ಬೆತ್ತಲೆ ದೃಶ್ಯವಿದ್ದು, ಆಂಡ್ರಿಯಾ ಬೆತ್ತಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಕತೆಯ ಬೇಡಿಕೆಯಂತೆ ಆಂಡ್ರಿಯಾಗೆ 15 ನಿಮಿಷಗಳ ಕಾಲ ವಿವಸ್ತ್ರವಾಗಿ ನಟಿಸುವಂತೆ ನಿರ್ದೇಶಕರು ಕೇಳಿದರಂತೆ. ಆದರೆ, ಆಂಡ್ರಿಯಾ ಆರಂಭದಲ್ಲಿ ನಿರಾಕರಿಸಿದರು ಎಂದು ವರದಿಯಾಗಿದೆ. ಆದರೂ ಕತೆಗಾಗಿ ಆಂಡ್ರಿಯಾ ನಗ್ನಳಾಗಿ ನಟಿಸಿದ್ದಾಳೆ ಎಂಬ ಅಪಪ್ರಚಾರ ನಡೆಯುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಸಿನಿಮಾ ರಿಲೀಸ್ ಆದ ನಂತರ ತಿಳಿಯಲಿದೆ. (ಏಜೆನ್ಸೀಸ್​)