ಭುವನೇಶ್ವರ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಮೀನೊಂದು ಭಾಗ್ಯದ ಲಕ್ಷ್ಮಿಯನ್ನು ಹೊತ್ತು ತಂದಿದೆ. ಒಂದೇ ಒಂದು ಮೀನು, ಮೀನುಗಾರನನ್ನು ಇದೀಗ ಲಕ್ಷಾಧಿಪತಿಯನ್ನಾಗಿ ಮಾಡಿದೆ. ಮೀನುಗಾರನ ಅದೃಷ್ಟ ನೋಡಿ ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ.
ಒಡಿಶಾದ ಭದ್ರಾಕ್ನ ಚಾಂದ್ಬಲಿಯ ಮೀನುಗಾರಿಗೆ ಬರೋಬ್ಬರಿ 32 ಕೆಜಿ ತೂಕದ ಮೀನು ಬಲೆಗೆ ಬಿದ್ದಿದೆ. ಆ ಮೀನು ಬರೋಬ್ಬರಿಗೆ 3,20,000 ರೂಪಾಯಿಗೆ ಮಾರಾಟವಾಗಿದೆ ಎಂದು ಮೀನುಗಾರ ಹೇಳಿಕೊಂಡಿದ್ದು, ಬಹಳ ಸಂತಸವನ್ನು ವ್ಯಕ್ತಪಡಿಸಿದ್ದಾನೆ.
ಮೀನಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆ ಮೀನಿನ ಒಂದು ಕೆಜಿ ಮಾಂಸಕ್ಕೆ 10 ಸಾವಿರ ರೂಪಾಯಿನಾ? ಎಂದು ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್)