ಕದಳಿ ವನಿತ ಸಮಾಜದಿಂದ ಶಿಕ್ಷಕರ ದಿನದ ಅಂಗವಾಗಿ ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. 
ನ್ಯೂಸ್

ರಸಪ್ರಶ್ನೆ ಸ್ಪರ್ಧೆ, ದುರ್ಗಿಗುಡಿ ಶಾಲೆ ಶಿಕ್ಷಕರು ಫಸ್ಟ್

ಶಿವಮೊಗ್ಗ: ಕದಳಿ ವನಿತ ಸಮಾಜದಿಂದ ಶಿಕ್ಷಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ದುರ್ಗಿಗುಡಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದರು.

ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 16 ಶಿಕ್ಷಕರ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ದುರ್ಗಿಗುಡಿ ಶಾಲೆ ಶಿಕ್ಷಕರು ಪಡೆದರೆ ತೃತೀಯ ಬಹುಮಾನವನ್ನು ಸೇಂಟ್ಸ್ ಪಾಲ್ಸ್ ಶಾಲೆ ಶಿಕ್ಷಕರು ಪಡೆದರು.
ಕದಳಿ ಸಮಾಜದ ಅಧ್ಯಕ್ಷೆ ಅರುಣಾದೇವಿ ಚಂದ್ರಶೇಖರ್ ಅವರು ಬಹುಮಾನ ವಿತರಿಸಿದರು. ಉಪಾಧ್ಯಕ್ಷೆ ಸವಿತಾ ಸುರೇಶ್, ಕಾರ್ಯದರ್ಶಿ ಶೈಲಾ ರವಿಕುಮಾರ್, ಸಹ ಕಾರ್ಯದರ್ಶಿ ಭಾರತಿ ಚಂದ್ರಶೇಖರ್, ಖಜಾಂಚಿ ರೂಪಾ ಸತ್ಯಾನಂದ, ನಿರ್ದೇಶಕರಾದ ಶೋಭಾ, ವಾಸಂತಿ, ಜ್ಯೋತಿ, ಗಿರಿಜಾ ಉಪಸ್ಥಿತರಿದ್ದರು.