ಉಡುಪಿ/ಬ್ರಹ್ಮಾವರ: ಬ್ರಹ್ಮಾವರ ಶಾಲೆಯ 10 ತರಗತಿ ವಿದ್ಯಾರ್ಥಿನಿ ನಮನಾ, ಶಾಲೆಯಲ್ಲಿ ಹಾಗೂ ಎನ್ಸಿಸಿ ಶಿಬಿರದಲ್ಲಿ ಕಲಿತಿದ್ದ ಪ್ರಾಥಮಿಕ ಚಿಕಿತ್ಸಾ ವಿಧಾನ ಪ್ರಯೋಗಿಸಿ ಕೆರೆಗೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ಯುವತಿಯ ಉಸಿರು ಮರಳುವಂತೆ ಮಾಡಿದ್ದಾರೆ. ಇದಕ್ಕೆ ಸ್ಥಳೀಯರೂ ಸಾಥ್ ನೀಡಿದ್ದಾರೆ.
ಈ ಸಾಹಸ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಮೆಚ್ಚುಗೆಯೂ ಲಭಿಸಿದೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರೂ ನಮನಾಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮನಾ ಹಿರಿಯ ಉಪನ್ಯಾಸಕಿ, ಎನ್ಎಸ್ಎಸ್ ಅಧಿಕಾರಿ ಸವಿತಾ ಎರ್ವಳ್-ಕುಮಾರ್ ದಂಪತಿ ಪುತ್ರಿ.
ಆಗಿದ್ದೇನು: ಬಾರ್ಕರಿನ ರಸ್ತೆಬದಿಯ ಕೆರೆಗೆ ಭಾನುವಾರ ಮಧ್ಯಾಹ್ನ ಕಾರು ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ಜತೆಗಿದ್ದ ಇವರ ಪ್ಲೈವುಡ್ ಸಂಸ್ಥೆಯ ಉದ್ಯೋಗಿ ಶ್ವೇತಾ ಪವಾಡಸದೃಶ ರೀತಿ ಬಚಾವಾಗಿದ್ದಾರೆ. ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಕಿಟಕಿ ತೆರೆಯಲಾಗದೆ ಇಬ್ಬರೂ ನೀರಿನಲ್ಲಿ ಮುಳುಗಿದ್ದರು. ಅಪಘಾತದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು 407 ಟೆಂಪೋಗೆ ಹಗ್ಗ ಕಟ್ಟಿ ಕಾರನ್ನು ಮೇಲಕ್ಕೆತ್ತಿದ್ದರು. ಸಂತೋಷ್ ಶೆಟ್ಟಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಯುವತಿ ನಮನಾ ಚಿಕಿತ್ಸೆಗೆ ಸ್ಪಂದಿಸಿ, ನಂತರ ಆಸ್ಪತ್ರೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕೆರೆಯಿಂದ ಕಾರನ್ನು ಮೇಲೆತ್ತಿ ಯುವತಿಗೆ ಪಂಪಿಂಗ್ ಮಾಡಿದೆ. ಆಕೆ ಸ್ವಲ್ಪ ಚೇತರಿಸಿ ಕೊಂಡ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಭಾಗದಲ್ಲಿ ಪದೇಪದೆ ಅಪಘಾತ ಸಂಭವಿಸುತ್ತಿದ್ದು, ತಡೆಗೋಡೆ ಅಗತ್ಯ. | ನಮನಾ ವಿದ್ಯಾರ್ಥಿನಿ https://www.vijayavani.net/madhya-pradesh-tea-sellers-daughter-gets-iaf-wings-as-top-flying-cadet/