ನ್ಯೂಸ್

ಪಾರ್ಶ್ವವಾಯು ಸಮಸ್ಯೆಗೆ ಗುಣಮಟ್ಟದ ಚಿಕಿತ್ಸೆಯೇ ರಾಮಬಾಣ

ಪಾರ್ಶ್ವವಾಯು (ಸ್ಟ್ರೋಕ್) ಅತ್ಯಂತ ಗಂಭೀರವಾದ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಒಂದಾಗಿದೆ. ಬಹುತೇಕ ಸಂದರ್ಭಗಳಲ್ಲಿ, 'ಗೋಲ್ಡನ್ ವಿಂಡೋ' ಎಂದೇ ಕರೆಯಲ್ಪಡುವ, ನಿರ್ಣಾಯಕ ಸಮಯದಲ್ಲಿ ತ್ವರಿತವಾದ ಚಿಕಿತ್ಸೆಯಿಂದ ಪಾರ್ಶ್ವವಾಯುವಿನ ಪರಿಣಾಮಗಳನ್ನು ತಿರುಗಿಸಿ, ರಕ್ತಪರಿಚಲನೆಯನ್ನು ಮರುಸ್ಥಾಪಿಸಬಹುದಾಗಿದೆ.

ಪಾರ್ಶ್ವವಾಯುವಿನ ಲಕ್ಷಣಗಳು ಕಾಣಿಸಿಕೊಂಡ ಮೊದಲ 4.5 ಗಂಟೆಗಳನ್ನು ವೈದ್ಯರು ಗೋಲ್ಡನ್ವಿಂಡೋ ಎಂದು ಕರೆಯುತ್ತಾರೆ. ಈ ಸಮಯದೊಳಗೆ ಸೂಕ್ತವಾದ ಚಿಕಿತ್ಸೆಯು ಲಭ್ಯವಾದಲ್ಲಿ ಮೆದುಳಿಗೆ ರಕ್ತದಹರಿವನ್ನು ಪುನಃ ಸ್ಥಾಪಿಸಿ, ಪ್ರಮುಖ ಪಾರ್ಶ್ವವಾಯುವನ್ನು ಹಿಮ್ಮೆಟ್ಟಿಸಿ, ದೀರ್ಘಕಾಲೀನ ಅಂಗವೈಕಲ್ಯವನ್ನು ತಡೆಯಬಹುದಾಗಿದೆ.

'ಕ್ಲೊಟ್ ಬಸ್ಟಿಂಗ್' ಅಥವಾ ರಕ್ತದಹರಿವನ್ನು ತಡೆಯುವ ಹೆಪ್ಪುಗಟ್ಟುವಿಕೆಯನ್ನು ಛಿದ್ರಿಸುವುದು ಪಾರ್ಶ್ವವಾಯು ಆರೈಕೆಯ ಪ್ರಾಥಮಿಕ ಮತ್ತು ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ಕ್ರಮವಾಗಿದೆ. ಈ ಚಿಕಿತ್ಸೆಗೆ, ಐಗಿ ಥ್ರoಭೋಲಿಸಿಸ್ - ಅಂದರೆ ಅಪಧಮನಿಯನ್ನು ನಿರ್ಬಂಧಿಸುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಪ್ರಬಲ ಇಂಜೆಕ್ಷನ್ (ಉದಾ: ಆಲ್ಟೆಫ್ಲೆಸ್ ಅಥವಾ ಟೆನೆಕ್ಷೆಪ್ಲೇಸ್ ನಂತಹ ಔಷಧಿಗಳನ್ನು ಬಳಸುವುದು) ಹೆಚ್ಚು ವ್ಯಾಪಕವಾಗಿದೆ. ಪಾರ್ಶ್ವವಾಯುವಿನ ಲಕ್ಷಣಗಳು ಗೋಚರಿಸಿದ ಮೊದಲ 4.5 ಗಂಟೆಯೊಳಗೆ ಇವುಗಳನ್ನು ಪರಿಣಾಮವು ಅತ್ಯಂತ ಫಲಕಾರಿಯಾಗಿದೆ.

ತುಂಬಾ ದೊಡ್ಡ ಗಾತ್ರದ ಹೆಪ್ಪುಗಟ್ಟುವಿಕೆಗಳನ್ನು, ಕೇವಲ ಇಂಜೆಕ್ಷನ್‌ನಿಂದ ನಿರ್ವಹಿಸುವುದು ಕಷ್ಟಕರ. ಇಂತಹ ಸಂದರ್ಭಗಳಲ್ಲಿ, ವೈದ್ಯರು ಯಾಂತ್ರಿಕ ಥ್ರoಬೆಕ್ಟಮಿ ಚಿಕಿತ್ಸಾ ಕ್ರಮವನ್ನು ಅನುಸರಿಸುತ್ತಾರೆ. ಇದು ಒಂದು ವಿಶೇಷವಾದ ವಿಧಾನವಾಗಿದ್ದು, ಇದರಲ್ಲಿ ಸಣ್ಣ ಸ್ಟೆಂಟ್ ತರಹದ ಸಾಧನವನ್ನು ಬಳಸಿಕೊಂಡು ಹೆಪ್ಪುಗಟ್ಟುವಿಕೆಯನ್ನು ದೈಹಿಕವಾಗಿ ತೆಗೆದುಹಾಕಲಾಗುತ್ತದೆ. ಆಯ್ದ ರೋಗಿಗಳಲ್ಲಿ, ಪಾರ್ಶ್ವವಾಯು ಪ್ರಾರಂಭವಾದ 24 ಗಂಟೆಗಳ ನಂತರವೂ ಇದನ್ನು ನಡೆಸಬಹುದಾಗಿದೆ, ಇದು ಮತ್ತೊಂದು ನಿರ್ಣಾಯಕ ಚಿಕಿತ್ಸೆಯಾಗಿದೆ.

ಆಧುನಿಕ ಪಾರ್ಶ್ವವಾಯು ಆರೈಕೆಯು ಈ ಚಿಕಿತ್ಸೆಗಳನ್ನು ಸುಧಾರಿತ ನ್ಯೂರೋ ಇಮೇಜಿಂಗ್ ಕ್ಷಿಪ್ರ ತಂಡದ ಸಮನ್ವಯದೊಂದಿಗೆ ಸಂಯೋಜಿಸುತ್ತದೆ. ಸರಿಯಾದ ರೋಗಿಗಳು ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಪಾರ್ಶ್ವವಾಯು ಆರೈಕೆಯಲ್ಲಿ ವೇಗ ಏಕೆ ಮುಖ್ಯ?

ಚಿಕಿತ್ಸೆಯಿಲ್ಲದೆ ಪ್ರತಿನಿಮಿಷವೂ, ಮೆದುಳುಸುಮಾರು 2 ಮಿಲಿಯನ್ ರಕ್ತಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ವಿಳಂಬ, ಮಾತಿನ ನಷ್ಟ ಅಥವಾ ಸಾವಿನಂತಹ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು. ಮತ್ತೊಂದೆಡೆ, ತ್ವರಿತ ಆಸ್ಪತೆಯ ಕ್ರಮವು ಜೀವಗಳನ್ನು ಉಳಿಸಿ, ರೋಗಿಗಳು ಕನಿಷ್ಠ ಅಥವಾ ಯಾವುದೇ ಅಂಗವೈಕಲ್ಯ ವಿಲ್ಲದೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ಪಾರ್ಶ್ವವಾಯು ಒಂದು ಗಂಭೀರವಾದ ವೈದ್ಯಕೀಯ ತುರ್ತು ಸ್ಥಿತಿಯಾಗಿದ್ದರೂ, ರೋಗಲಕ್ಷಣಗಳನ್ನು ಮೊದಲೇ ಗುರುತಿಸಿ, ಸುಸಜ್ಜಿತವಾದ ಆಸ್ಪತ್ರೆಗೆ ತಲುಪುವುದು ಮತ್ತು ಸುಧಾರಿತ ಪಾರ್ಶ್ವವಾಯು ಚಿಕಿತ್ಸೆಯನ್ನು ಪಡೆಯುವುದು, ಮಾತಿನ ನಷ್ಟ, ಅಂಗವೈಕಲ್ಯ, ಅಥವಾ ಜೀವನಷ್ಟದಂತಹ ಗಂಭೀರ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ.

ಡಾ. ಮಕ್ಸೂದ್ ಅಹಮದ್ ಸೀನಿಯ‌ರ್ ಕನ್ಸ್‌ಲ್ವೆಂಟ್ ನರಶಸ್ತ್ರ ಚಿಕಿತ್ಸೆ ವಿಭಾಗ, ಮಣಿಪಾಲ್‌ ಆಸ್ಪತ್ರೆ, ಮೈಸೂರು