ನ್ಯೂಸ್

ದೆಹಲಿಯಿಂದ ಹೊರಟ ವಿಮಾನ ಪಾಕಿಸ್ತಾನದಲ್ಲಿ ಇಳಿಯಿತು; ನೂರಕ್ಕೂ ಅಧಿಕ ಪ್ರಯಾಣಿಕರಿದ್ದ ಕತಾರ್ ಏರ್​ವೇಸ್​..

ನವದೆಹಲಿ: ದೆಹಲಿಯಿಂದ ಹೊರಟ ವಿಮಾನವೊಂದು ಇಂದು ಪಾಕಿಸ್ತಾನದಲ್ಲಿ ಹೋಗಿ ಇಳಿದ ಪ್ರಸಂಗ ನಡೆದಿದೆ. ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ಈ ವಿಮಾನದಲ್ಲಿ ನೂರು ಮಂದಿ ಪ್ರಯಾಣಿಕರಿದ್ದರು.

ಕತಾರ್​ ಏರ್​​ವೇಸ್​ ಕ್ಯೂಆರ್ 579 ವಿಮಾನ ಇಂದು ಬೆಳಗ್ಗೆ ನೂರಕ್ಕೂ ಅಧಿಕ ಪ್ರಯಾಣಕರೊಂದಿಗೆ ದೆಹಲಿಯಿಂದ ದೋಹಾಗೆ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ದೋಹಾ ಬದಲು ಪಾಕಿಸ್ತಾನದತ್ತ ತಿರುಗಿಸಿ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಗಿತ್ತು.

ಬಳಿಕ ಬದಲಿ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಕರಾಚಿಯಲ್ಲಿದ್ದ ಪ್ರಯಾಣಿಕರನ್ನು ಸಂಜೆ 4.15ರ ಸುಮಾರಿಗೆ ದೋಹಾಗೆ ತಲುಪಿದ್ದು, ಅಲ್ಲಿಂದ ಪ್ರಯಾಣಿಕರ ಮುಂದಿನ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.