pwd official car rammed  
ನ್ಯೂಸ್

ಲೋಕೋಪಯೋಗಿ ಅಧಿಕಾರಿಯ ಕಾರು ಹರಿದು ಮೂವರು ರೈತರ ಸಾವು!

ಉತ್ತರಪ್ರದೇಶ: ಉತ್ತರಪ್ರದೇಶದ(Uttarprdesh) ಕಾನ್ಪುರದಲ್ಲಿ(Kanpur) ಲೋಕೋಪಯೋಗಿ ಅಧಿಕಾರಿಯ ಕಾರು ಹರಿದು ಮೂವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಕುಡಿದ ಅಮಲಿನಲ್ಲಿ ಕಾರನ್ನು ಚಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಈ ಘಟನೆ ಬಗ್ಗೆ ವರದಿ(Report) ನೀಡಿದ್ದು, ಮದ್ಯದ ಅಮಲಿನಲ್ಲಿದ್ದ ಚಾಲಕ ಕಾರನ್ನು ಮನಬಂದಂತೆ ಚಲಾಯಿಸಿ ಮೂವರು ರೈತರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಘಟನೆ ಸಂಭವಿಸಿದ್ದು, ಅಪಘಾತ(Accident) ನಡೆದ ಸ್ಥಳಕ್ಕೆ ಪೊಲೀಸರು ಕೂಡಲೇ ಭೇಟಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಚಾಲಕ ಅಜೀತ್ ಕುಮಾರ್ ಪಾಂಡೆಯನ್ನು ಬಂಧಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ರೈತರನ್ನು ಸುರೇಂದ್ರ ಸಿಂಗ್ (62), ಅಹಿಬರನ್ ಸಿಂಗ್ (63) ಮತ್ತು ಘಸೀತೆ ಯಾದವ್ (65) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).