ನ್ಯೂಸ್

ಪುಟಿನ್-ಝೆಲೆನ್ಸ್ಕಿ ಶೃಂಗಸಭೆ: ಮಾತುಕತೆಯನ್ನು ಜಿನೀವಾದಲ್ಲಿ ಆಯೋಜಿಸಬಹುದು ಎಂದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್| Emmanuel Macron

Emmanuel Macron: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ನಡೆಯಲಿರುವ ಸಭೆಯನ್ನು ಜಿನೀವಾದಲ್ಲಿ ಆಯೋಜಿಸಬಹುದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೂಚಿಸಿದ್ದಾರೆ.

ಸೋಮವಾರ (ಆಗಸ್ಟ್,18) ಶ್ವೇತಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಗಳಲ್ಲಿ ಯುಕ್ರೇನಿಯನ್ ಅಧ್ಯಕ್ಷರೊಂದಿಗೆ ಮ್ಯಾಕ್ರನ್ ಮತ್ತು ಇತರ ಯುರೋಪಿಯನ್ ನಾಯಕರು ಸೇರಿಕೊಂಡ ನಂತರ ಮಾತನಾಡಿದ ಮ್ಯಾಕ್ರನ್, ಸಭೆಯನ್ನು ಆತಿಥ್ಯ ವಹಿಸಲು ತಟಸ್ಥ ದೇಶಬೇಕು. ಬಹುಶಃ ಸ್ವಿಟ್ಜರ್ಲೆಂಡ್​ನ ಜಿನೀವಾ ಮಾಡಬಹುದೆಂದು ಹೇಳಿದ್ದಾರೆ.

ರಷ್ಯಾ ಮತ್ತು ಯುಕ್ರೇನ್​ ಕಳೆದ ಬಾರಿ ದ್ವಿಪಕ್ಷೀಯ ಮಾತುಕತೆಗಳು ಇಸ್ತಾನ್‌ಬುಲ್‌ನಲ್ಲಿ ನಡೆದವು ಎಂದು ಹೇಳಿದರು. ಮೇ ಮತ್ತು ಜುಲೈ ನಡುವೆ ಟರ್ಕಿಯಲ್ಲಿ ನಡೆದ ರಷ್ಯಾ ಮತ್ತು ಯುಕ್ರೇನ್ ನಡುವಿನ ಮೂರು ಸುತ್ತಿನ ಕೆಳಮಟ್ಟದ ಮಾತುಕತೆಗಳನ್ನು ಮ್ಯಾಕ್ರನ್​ ಉಲ್ಲೇಖಿಸಿದರು.

ಯುಕ್ರೇನ್‌ಗೆ ಭದ್ರತೆಯನ್ನು ಒದಗಿಸುವ ಕುರಿತು ವಾಷಿಂಗ್ಟನ್‌ನಲ್ಲಿ ನಿರ್ಧರಿಸಿದ ವಿಷಯಗಳ ಕುರಿತು ನವೀಕೃತವಾಗಿರಲು ಫ್ರಾನ್ಸ್ ಮತ್ತು ಬ್ರಿಟನ್ ಮಂಗಳವಾರ ಇತರ ಉಕ್ರೇನಿಯನ್ ಮಿತ್ರರಾಷ್ಟ್ರಗಳೊಂದಿಗೆ ಸಭೆ ನಡೆಸಲಿವೆ ಎಂದು ಮ್ಯಾಕ್ರನ್ ತಿಳಿಸಿದ್ದಾರೆ. ಇದು ಟ್ರಂಪ್ ಅವರೊಂದಿಗಿನ ಸಭೆಗಳಲ್ಲಿ ಪ್ರಮುಖ ಚರ್ಚೆಯ ಅಂಶವಾಗಿದೆ.

ಝೆಲೆನ್ಸ್ಕಿ ಅವರು ರಷ್ಯಾಕ್ಕೆ ತಮ್ಮ ಪ್ರದೇಶವನ್ನು ಬಿಟ್ಟುಕೊಡುವಂತೆ ಒತ್ತಾಯಿಸಲಾಗುತ್ತದೆಯೇ ಎಂದು ಉಲ್ಲೇಖಿಸಿದ ಮ್ಯಾಕ್ರನ್, ಅದು ಯುಕ್ರೇನ್‌ಗೆ ಬಿಟ್ಟದ್ದು ಎಂದು ಉತ್ತರಿಸಿದ್ದಾರೆ.ಅಲ್ಲದೆ, ನಾವು ಕಾನೂನು ಮಾನ್ಯತೆಯ ಬಗ್ಗೆ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು. ಹಲವು ದೇಶಗಳು ಬಲವಂತವಾಗಿ ಪ್ರದೇಶವನ್ನು ವಶಪಡಿಸಿಕೊಳ್ಳಬಹುದು ಎಂದು ಮ್ಯಾಕ್ರನ್ ಹೇಳಿದ್ದಾರೆ.(ಏಜೆನ್ಸೀಸ್​)