ಆಂಧ್ರಪ್ರದೇಶ: ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಟಾಲಿವುಡ್ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಅಧಿಕೃತ ರಿಲೀಸ್ ಯಾವಾಗ? ಎಂದು ಪ್ರಶ್ನಿಸಿದ್ದ ಸಿನಿಪ್ರಿಯರಿಗೆ ಡಿ.06 ಎಂದಿದ್ದ ಚಿತ್ರತಂಡ ಇದೀಗ ಮತ್ತೆ ಬಿಡುಗಡೆ ಡೇಟ್ನಲ್ಲಿ ಬದಲಾವಣೆ ತಂದಿದ್ದು, ಡಿಸೆಂಬರ್ 05ರಂದು ಪುಷ್ಪ 2 ತೆರೆಗೆ ಬರಲಿದೆ ಎಂದು ಖಚಿತ ಮಾಹಿತಿ ನೀಡಿದ್ದಾರೆ. ಇನ್ನು ಈ ಮಧ್ಯೆಯೇ ಚಿತ್ರದ ನಿರ್ಮಾಪಕರು ಶಾಕಿಂಗ್ ವಿಷಯವೊಂದನ್ನು (Pushpa 3) ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Health Tips| ಕಣ್ಣು, ಹೃದಯದ ಆರೋಗ್ಯಕ್ಕೆ ಉಪಯುಕ್ತ ಎಲೆಕೋಸು; ಇದನ್ನು ಸೇವನೆಯಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು
'ಪುಷ್ಪ ದಿ ರೂಲ್' ಮೊದಲ ಭಾಗ ಸಿನಿಪ್ರಿಯರಿಗೆ ಎಷ್ಟು ರೋಚಕವಾಗಿತ್ತೋ ಅದರಂತೆಯೇ ಎರಡನೇ ಭಾಗ ಕೂಡ ಇರಲಿದೆ. ಇನ್ನು ಕೆಲವೇ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿರುವ 'ಪುಷ್ಪ 2 ದಿ ರೈಸ್' ಚಿತ್ರದಲ್ಲಿ ಪಾರ್ಟ್ 3ಗೆ ಬೇಕಾದ ಎಲ್ಲಾ ಗಟ್ಟಿ ಅಂಶಗಳಿವೆ. ಹೀಗಾಗಿ ಭಾಗ ಮೂರು ಬರುವುದು ಬಹುತೇಕ ಖಚಿತ. ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸದ್ಯದ ಮಟ್ಟಿಗೆ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ ನಿರ್ಮಾಪಕರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಡಿಸೆಂಬರ್ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರದ ಬಗ್ಗೆ ಸದ್ಯ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದ್ದು, ಈ ಮಧ್ಯೆಯೇ ಚಿತ್ರದ ಮೂರನೇ ಭಾಗದ ಸುದ್ದಿ ಹೊರಬಿದ್ದಿರುವುದು ಈಗಿರುವ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).