ನ್ಯೂಸ್

ರಶ್ಮಿಕಾ ಹುಟ್ಟುಹಬ್ಬದಂದೇ ಫ್ಯಾನ್ಸ್ ಗೆ ಗಿಫ್ಟ್ ಕೊಟ್ಟ ಮೇಕರ್ಸ್..ಶ್ರೀವಲ್ಲಿ ಲುಕ್ ಗೆ ಅಭಿಮಾನಿಗಳು ಥ್ರಿಲ್!

ಮುಂಬೈ: ರಶ್ಮಿಕಾ ಮಂದಣ್ಣ ಸೌತ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲೂ ಆಕೆ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ. ರಶ್ಮಿಕಾ ಬಾಲಿವುಡ್‌ಗೆ ಕಾಲಿಟ್ಟು ಹೆಚ್ಚು ಸಮಯ ಕಳೆದಿಲ್ಲ, ಆದರೆ ಅಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ಪುಷ್ಪ ನಂತರ ರಶ್ಮಿಕಾ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಶ್ಮಿಕಾ ಅಭಿನಯದ 'ಪುಷ್ಪ 2' ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇಂದು ರಶ್ಮಿಕಾ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪುಷ್ಪ 2 ನಿರ್ಮಾಪಕರು ರಶ್ಮಿಕಾ ಅವರ ಹುಟ್ಟುಹಬ್ಬವನ್ನು ಹೆಚ್ಚು ವಿಶೇಷವಾಗಿಸಿದ್ದಾರೆ. ಹೌದು, ಇಂದು ಪುಷ್ಪ 2 ಚಿತ್ರದ ಶ್ರೀವಲ್ಲಿ ಲುಕ್ ಅನ್ನು ಶೇರ್ ಮಾಡಲಾಗಿದೆ. ಇದರಲ್ಲಿ ರಶ್ಮಿಕಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಗಮನಿಸಿದರೆ ರಶ್ಮಿಕಾ ಸೀರೆ ಉಟ್ಟು, ಭಾರವಾದ ಆಭರಣಗಳನ್ನು ಧರಿಸಿದ್ದಾರೆ. ಜತೆಗೆ ಹಣೆಗೆ ಹಚ್ಚಿರುವ ಸಿಂಧೂರದತ್ತ ಜನರ ಗಮನ ಹರಿದಿದೆ. ಇದರಲ್ಲಿ ಅವರ ಫೇಸ್ ಗಮನಿಸಿದರೆ ಅವರು ತುಂಬಾ ಕೋಪಗೊಂಡಂತೆ ಕಾಣುತ್ತಾರೆ. ಪೋಸ್ಟರ್‌ನಲ್ಲಿ  ಜನ್ಮದಿನದ ಶುಭಾಶಯಗಳು ಶ್ರೀವಲ್ಲಿ ಎಂದು ಬರೆದಿರುವುದನ್ನು ನಾವು ನೋಡಬಹುದು.

ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಮೇಕರ್ಸ್..

ರಶ್ಮಿಕಾ ಹುಟ್ಟುಹಬ್ಬದಂದು ಶ್ರೀವಲ್ಲಿ ಲುಕ್ ಪೋಸ್ಟರ್ ಶೇರ್ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ ತಯಾರಕರು. ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ - 'ಜನರ ಹೃದಯ ಕದ್ದ ಶ್ರೀವಲ್ಲಿ ಅಕಾ ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು'.  ಎಂದು ಬರೆಯಲಾಗಿದೆ.

ರಶ್ಮಿಕಾ ಲುಕ್ ನೋಡಿ ಕೊಂಡಾಡಿದ ಅಭಿಮಾನಿಗಳು  

ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳು "ಫೈಯರ್ ಇಮೋಜಿ, ಮತ್ತೆ ಕೆಲವರು ಹೃದಯದ ಜೊತೆಗೆ ಫೈಯರ್ ಇಮೋಜಿ"ಗಳನ್ನು ಕಾಮೆಂಟ್ ಸೆಕ್ಷನ್ ನಲ್ಲಿ ಹಾಕಿದ್ದಾರೆ. ಕೆಲವೇ ಸಮಯದಲ್ಲಿ ಈ ಪೋಸ್ಟ್ ಅನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ಏಪ್ರಿಲ್ 8 ರಂದು ಟೀಸರ್ ಬಿಡುಗಡೆ

'ಪುಷ್ಪ 2' ದಿ ರೂಲ್ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ. ಪೋಸ್ಟರ್ ಜೊತೆಗೆ ನಿರ್ಮಾಪಕರು ಈ ಮಾಹಿತಿಯನ್ನು ನೀಡಿದ್ದಾರೆ. ಇದನ್ನು ಕೇಳಿದ ನಂತರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.

ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜನ್, ಫಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.