ನ್ಯೂಸ್

Pushpa-2 ಚಿತ್ರದಲ್ಲಿ ಡ್ಯಾನ್ಸ್​ ಮಾಡಿ ಏಳು ಕೋಟಿ ರೂ. ಉಳಿಸಿದ ಕಿಸ್​ ಬೆಡಗಿ; ನಂಬಲು ಅಸಾಧ್ಯವಾದರು ಇದು ನಿಜ

ಹೈದರಾಬಾದ್​: ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ-2 (Pushpa-2 ) ದಿ ರೂಲ್​ ಚಿತ್ರದ ಬಿಡುಗಡೆಗೆ 20 ದಿನಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಿನಿರಸಿಕರಿಗೆ ಪುಷ್ಪಗೆ (Pushpa-2 ) ಸಂಬಂಧಿಸಿದ ಅಪ್ಡೇಟ್​ಗಳು ನಿರಂತರವಾಗಿ ದೊರೆಯುತ್ತಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಶೂಟಿಂಗ್​ ಬಹುತೇಕ ಮುಕ್ತಾಯಗೊಂಡಿದ್ದು, ಐಟಂ ಹಾಡಿನ ಚಿತ್ರೀಕರಣವನ್ನು ಸಹ ಮುಗಿಸಲಾಗಿದೆ. ಈ ಹಾಡಿಗೆ ಕಿಸ್​ ಬೆಡಗಿ ಶ್ರೀಲೀಲಾ ಹೆಜ್ಜೆ ಹಾಕಿ, ಶ್ರೀಲೀಲಾ (Sreeleela) ಆಗಮನದಿಂದ ಚಿತ್ರತಂಡಕ್ಕೆ ಬರೋಬ್ಬರಿ 7 ಕೋಟಿ ರೂಪಾಯಿ ಉಳಿದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗುಂಟೂರು ಕಾರಂ ಬಂದ ನಂತರ ಶ್ರೀಲೀಲಾ (Sreeleela) ಹೆಸರು ಮತ್ತಷ್ಟು ಜನಪ್ರಿಯವಾಯಿತು. ಈ ಚಿತ್ರದಲ್ಲಿ ಅವರ ಮಾಸ್ ಸ್ಟೆಪ್ಸ್‌ಗೆ ಯುವಕರು ಫಿದಾ ಆಗಿದ್ದಾರೆ. ಹೀಗಾಗಿ ಪುಷ್ಪ 2 ಚಿತ್ರತಂಡಕ್ಕೆ ಅವರಿಂದ ಐಟಂ ಸಾಂಗ್ ಮಾಡಿಸುವ ಆಲೋಚನೆ ಬಂದಿತು. ಬಾಲಿವುಡ್ ನಟಿಯರಿಗೆ ಈ ಹಾಡಿಗಾಗಿ ಮೊದಲು ಅವಕಾಶ ನೀಡಲಾಗಿತ್ತು, ಆದರೆ ಅದು ಫಲಿಸಲಿಲ್ಲ. ಹೀಗಾಗಿ ಚಿತ್ರತಂಡ ಶ್ರೀಲೀಲಾ (Sreeleela) ಅವರಿಗೆ ಮಣೆ ಹಾಕಿದ್ದು, ಇದರಿಂದ ಚಿತ್ರತಂಡಕ್ಕೆ ಭರ್ಜರಿ ಹಣ ಉಳಿದಿದೆ.

ಪುಷ್ಪ-1 ನಲ್ಲಿ ನಟಿ ಸಮಂತಾ (Samantha) ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಬಿಡುಗಡೆ ಆಗಿದ್ದ ಈ ಹಾಡು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹಾಗಾಗಿ ಪುಷ್ಪ 2 (Pushpa-2)  ಸಿನಿಮಾದ ಐಟಂ ಹಾಡಿನ ಬಗ್ಗೆಯೂ ಸಹ ಚಿತ್ರತಂಡ ಗಂಭೀರವಾಗಿ ಪರಿಗಣಿಸಿದ್ದು, ಸ್ಟಾರ್ ನಾಯಕಿಯನ್ನು ಐಟಂ ಹಾಡಿಗೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಇದರಲ್ಲಿ ಪ್ರಮುಖವಾಗಿ ಬಾಲಿವುಡ್​ ನಟಿಯರಾದ ಶ್ರದ್ಧಾ ಕಪೂರ್ (Shraddha Kapoor)​, ಕಿಯಾರಾ ಅಡ್ವಾನಿ (Kiara Advani) ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ, ಅದು ಫಲಿಸಲಿಲ್ಲ.

ಶ್ರದ್ಧಾ ಕಪೂರ್​ (Shraddha Kapoor) ಹೆಸರು ಬಹುತೇಕ ಅಂತಿಮಗೊಂಡಿತ್ತಾದರು ಸಂಭಾವನೆಯ ಕಾರಣಕ್ಕೋ ಅಥವಾ ಚಿತ್ರತಂಡ ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಕಾರಣ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಯಿತು. ಶ್ರದ್ಧಾ ಕಪೂರ್, ಪುಷ್ಪ-2 (Pushpa-2) ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರಂತೆ. ಆದರೆ ಶ್ರೀಲೀಲಾ ಒಂದು ಕೋಟಿ ರೂ. ಪಡೆದು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಚಿತ್ರತಂಡ ಶ್ರೀಲೀಲಾ (Sreeleela) ಅವರಿಗೆ ಮಣೆ ಹಾಕಿತು ಎಂದು ಹೇಳಲಾಗಿದೆ.

ಸುಕುಮಾರ್​ (Sukumar) ನಿರ್ದೇಶನದ ಪುಷ್ಪ-2 ಚಿತ್ರವು ಡಿಸೆಂಬರ್​ 05ರಂದು ಬಿಡುಗಡೆಯಾಗುತ್ತಿದ್ದು, ಅಲ್ಲು ಅರ್ಜುನ್​ (Allu Arjun)  ಜೊತೆಗೆ ಚಿತ್ರದಲ್ಲಿ  ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರಕ್ಕೆ ದೇವಿಶ್ರೀಪ್ರಸಾದ್​ ಸಂಗೀತ ಸಂಯೋಜಿಸಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ.

https://www.vijayavani.net/pakistan-to-held-talks-with-bcci-amid-champions-trophy-row

https://www.vijayavani.net/police-to-appeal-in-supreme-court-questioning-interim-bail-to-actor-darshan