ನ್ಯೂಸ್

6 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿ 1 ಕೋಟಿ ರೂ. ಗೆದ್ದ! ರಾತ್ರೋರಾತ್ರಿ ಕೋಟ್ಯಾಧಿಪತಿಯಾದ..lottery

lottery :  ಪಂಜಾಬ್‌ನ ಮೋಗಾ ಜಿಲ್ಲೆಯ ದಿನಗೂಲಿ ಕಾರ್ಮಿಕ ಜಸ್ಮಾಯಿಲ್ ಸಿಂಗ್, ಕೇವಲ 6 ರೂ. ಬೆಲೆಯ ರಾಜ್ಯ ಲಾಟರಿ ಟಿಕೆಟ್ ಖರೀದಿ ಮಾಡುವ  ಮೂಲಕ 1 ಕೋಟಿ ರೂ. ಗೆದ್ದ ನಂತರ ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು.

ಜಸ್ಮಾಯಿಲ್ ಸಿಂಗ್  ಇಟ್ಟಿಗೆ ಗೂಡುಗಳಲ್ಲಿ  ಕೆಲಸ ಮಾಡುತ್ತಿದ್ದನು. ಫಿರೋಜ್‌ಪುರ ಜಿಲ್ಲೆಯ ಜಿರಾಗೆ ಭೇಟಿ ನೀಡಿದಾಗ 6 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದನು. ಅದನ್ನು ಖರೀದಿಸಿದ ಕೆಲವು ಗಂಟೆಗಳ ನಂತರ, ಒಂದು ಫೋನ್ ಕರೆ ಬಂದಿತು. "ಶರ್ಮಾ ಜಿ ಕರೆ ಮಾಡಿ, 'ನಿಮ್ಮ ಸಂಖ್ಯೆಯನ್ನು ಪರಿಶೀಲಿಸಿ, ನೀವು 1 ಕೋಟಿ ರೂ. ಗೆದ್ದಿದ್ದೀರಿ' ಎಂದು ಹೇಳಿದರು.  ಜಾಕ್‌ಪಾಟ್ ಹೊಡೆದು ದಿನಗೂಲಿ ಮಾಡುವ ವ್ಯಕ್ತಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದನು. 

ಜಸ್ಮಾಯಿಲ್ ಸಿಂಗ್ ಮಾತನಾಡಿ,  ನನಗೆ ನಂಬಲು ಸಾಧ್ಯವಾಗಲಿಲ್ಲ,ಈ ವಾರದ ಆರಂಭದಲ್ಲಿ ಮಧ್ಯಾಹ್ನ 1:00 ರ ಸುಮಾರಿಗೆ ವಿಜೇತ ಟಿಕೆಟ್ ಅನ್ನು ಡ್ರಾ ಮಾಡಲಾಯಿತು. ಈ ಮೂಕಲವಾಗಿ ನನಗೆ ತುಂಬಾ ಸಂತೋಷವಾಗಿದೆ. ನಾನು ಗ್ರಾಮದಲ್ಲಿ ಸಿಹಿ ತಿಂಡಿ ಹಂಚುವ ಮೂಲಕವಾಗಿ ಸಂಭ್ರಮಿಸಿದ್ದೇನೆ. ನ್ನ 25 ಲಕ್ಷ ರೂ. ಸಾಲವನ್ನು ತೀರಿಸಲು ಮತ್ತು ನನ್ನ ಮಕ್ಕಳ ಭವಿಷ್ಯಕ್ಕಾಗಿ ನಾನು ಇದನ್ನು ಬಳಸುತ್ತೇನೆ ಎಂದಿದ್ದಾನೆ.

ಜಸ್ಮಾಯಿಲ್ ಸಿಂಗ್  ಪತ್ನಿ ವೀರ್ಪಾಲ್ ಕೌರ್ ಕೂಡ ಅಷ್ಟೇ ಸಂತೋಷಪಟ್ಟರು. "ಇಂತಹ ದಿನವನ್ನು ನಾವು ಎಂದಿಗೂ ಊಹಿಸಿರಲಿಲ್ಲ. ನಾವು ತುಂಬಾ ಸಂತೋಷವಾಗಿದ್ದೇವೆ. ಈಗ ನಾವು ನಮಗೂ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಜೀವನವನ್ನು ಒದಗಿಸಬಹುದು" ಎಂದು ಕೌರ್ ಹೇಳಿದರು.

ಫಿರೋಜ್‌ಪುರ ಜಿಲ್ಲೆಯ ನಿವಾಸಿಯೊಬ್ಬರು ಲಾಟರಿ ಮೂಲಕ ಕೋಟ್ಯಾಧಿಪತಿಯಾಗುತ್ತಿರುವುದು ಇದು ನಾಲ್ಕನೇ ಬಾರಿ ಎಂದು ಸ್ಥಳೀಯ ಅಂಗಡಿಯವರು ತಿಳಿಸಿದ್ದಾರೆ.