ಎನ್.ಆರ್.ಪುರದಲ್ಲಿ ಪುನೀತ್‌ರಾಜ್‌ಕುಮಾರ್ ಅವರ 25 ಅಡಿ ಕಟೌಟ್ ಹಾಕಿ ಅಭಿಮಾನಿಗಳಿಂದ ಜನ್ಮದಿನ ಆಚರಿಸಲಾಯಿತು. 
ನ್ಯೂಸ್

25 ಅಡಿ ಎತ್ತರದ ಕಟೌಟ್ ಅನಾವರಣ

ಜಿ. ಗಜೇಂದ್ರ

ಎನ್.ಆರ್.ಪುರ: ಪುನೀತ್ ರಾಜ್‌ಕುಮಾರ್ ಅವರ 25 ಅಡಿ ಎತ್ತರದ ಕಟೌಟ್ ಹಾಕಿ ವಿಶೇಷವಾಗಿ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಪ್ರವೀಣ್ ತಿಳಿಸಿದರು. ಭಾನುವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಜನ್ಮದಿನ ಆಚರಣೆಯಲ್ಲಿ ಮಾತನಾಡಿ, ಪುನೀತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ವಿತರಿಸಲಾಗುತ್ತಿದೆ ಎಂದರು. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಕಾರ್ಯದರ್ಶಿ ಕಾರ್ತಿಕ್, ಪದಾಧಿಕಾರಿಗಳಾದ ಕುಮಾರ, ಸುಂದರೇಶ್, ಆನಂದ, ಸಂತೋಷ್ ಮತ್ತಿತರರಿದ್ದರು.