ನ್ಯೂಸ್

ಅಪ್ಪು 50ನೇ ಹುಟ್ಟುಹಬ್ಬ: ಮಾರ್ಚ್​ 17ರಂದು ಮಸಾಲಪೂರಿ, ಪಾನಿಪೂರಿ ಉಚಿತ.. puneeth rajkumar 50th birthday

puneeth rajkumar 50th birthday: ಸ್ಯಾಂಡಲ್​ವುಡ್​ ನಟ ಪುನೀತ್ ರಾಜ್​ಕುಮಾರ್ ಅವರ 50ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ  ಮಾರ್ಚ್​ 17 ರಂದು ಅಭಿಮಾನಿಯೊಬ್ಬರು ಮಸಾಲಪೂರಿ, ಪಾನಿಪೂರಿ ಉಚಿತವಾಗಿ ನೀಡುವುದಾಗಿ ಹೇಳಿ ಬ್ಯಾನರ್ ಹಾಕಿದ್ದಾರೆ. ಈ ಬ್ಯಾನರ್​ ಸಖತ್​ ವೈರಲ್​​ ಆಗಿದೆ.

ಸಿಲಿಕಾನ್ ಸಿಟಿಯ ಮಹಾಲಕ್ಷ್ಮಿ ಲೇಔಟ್​ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್​ನವರು ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಉಚಿತವಾಗಿ ಮಸಾಲಪೂರಿ, ಪಾನಿಪೂರಿಯನ್ನು ಮಾರ್ಚ್ 17 ರಂದು ಸಂಜೆ ಸಮಯದಲ್ಲಿ ನೀಡುತ್ತಾರೆ.

ಪುನೀತ್ ರಾಜ್​ಕುಮಾರ್ ಅವರ 50ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್​ ಟ್ರೋಫಿ ಗೆದ್ದಿದ್ದಕ್ಕಾಗಿ ಮಸಾಲಪೂರಿ, ಪಾನಿಪೂರಿ ಉಚಿತವಾಗಿ ನೀಡಲಾಗುತ್ತದೆ.

ಮಸಾಲಪೂರಿ, ಪಾನಿಪೂರಿ ತಿನ್ನಬೇಕು ಎನ್ನುವವರು ಅಂದು ಮಹಾಲಕ್ಷ್ಮಿ ಲೇಔಟ್​ನ ಸ್ವಿಮ್ಮಿಂಗ್ ಪೂಲ್ ಎದುರುಗಡೆ ಇರುವ ಅನಿಲ್ ಚಾಟ್ಸ್ ಸೆಂಟರ್​ಗೆ ಭೇಟಿ ನೀಡಬಹುದು.   ಈಗಾಗಲೇ ತಮ್ಮ ಅಂಗಡಿ ಮುಂದೆ ಬ್ಯಾನರ್ ಅನ್ನು ಅಳವಡಿಸಿದ್ದಾರೆ.

ನಾಳೆ ಅಪ್ಪು ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಟಿಕೆಟ್​ಗಳೆಲ್ಲಾ ಬಹುತೇಕ ಮಾರಾಟವಾಗಿವೆ.