ಮಹಾರಾಷ್ಟ್ರ: ದೇಶಾದ್ಯಂತ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸುವ ಸಲುವಾಗಿ ಪುಣೆಯ ವೈದ್ಯರೊಬ್ಬರು ತಮ್ಮ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಗು ಹೆಣ್ಣಾಗಿದ್ದರೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಡಾ ಗಣೇಶ್ ರಾಖ್ ಅವರು ಪುಣೆಯ ಹಡಪ್ಸರ್ ಪ್ರದೇಶದಲ್ಲಿ ಹೆರಿಗೆ-ಕಮ್-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿದ್ದಾರೆ. 11 ವರ್ಷಗಳ ಹಿಂದೆ ಈ ಸೇವೆ ಆರಂಭಿಸಿದ ವೈದ್ಯರು ಇಲ್ಲಿಯವರೆಗೆ 2,400 ಕ್ಕೂ ಹೆಚ್ಚು ಹೆಣ್ಣುಮಗುವಿಗೆ ಒಂದು ಪೈಸೆ ಶುಲ್ಕವನ್ನೂ ವಿಧಿಸದೆ ಉಚಿತ ಸೇವೆ ನೀಡಿದ್ದಾರೆ.
ಅಷ್ಟೇ ಅಲ್ಲ, ಅವರ ಆಸ್ಪತ್ರೆಯಲ್ಲಿ ಜನಿಸಿದ ಎಲ್ಲ ಹೆಣ್ಣು ಮಗು ಸಹ ಸಿಬ್ಬಂದಿಯಿಂದ ಅದ್ದೂರಿ ಸ್ವಾಗತ ಪಡೆಯುತ್ತದೆ. ಪ್ರತಿ ಬಾರಿಯೂ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನನವಾದ ಕೂಡಲೇ ಕೇಕ್ ಕತ್ತರಿಸಲಾಗುತ್ತದೆ. ಜತೆಗೆ ಪೋಷಕರ ಮೇಲೆ ಹೂವನ್ನು ಸುರಿಸುವುದರ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ವೈದ್ಯರು ಆಸ್ಪತ್ರೆಯಿಂದ ತಾಯಿ ಮಗು ಡಿಸ್ಚಾರ್ಜ್ ಆದ ಮೇಲೆ ಅಲಂಕೃತವಾದ ಆಟೋ ರಿಕ್ಷಾದಲ್ಲಿ ಕಳುಹಿಸಿಕೊಡುತ್ತಾರೆ