ಸಾಗರ ವಿಎಚ್‌ಪಿ ಕಚೇರಿಗೆ ಬಂದ ಸಮರ್ಥ ರಾಮದಾಸರ ಪದುಕೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ಐ.ವಿ.ಹೆಗಡೆ, ಮಂಜುಗೌಡ, ಕಿರಣ್ ಗೌಡ ಇತರರಿದ್ದರು.  
ನ್ಯೂಸ್

ಸಮರ್ಥ ರಾಮದಾಸರ ಪಾದುಕೆಗೆ ಪೂಜೆ

ಸಾಗರ: ನಗರದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಚೇರಿಗೆ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಗುರು ಸಮರ್ಥ ರಾಮದಾಸರ ಪಾದುಕೆ ಆಗಮಿಸಿದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮ ದೇಶಕ್ಕೆ ಮಾದರಿ. ಹಿಂದು ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪದ ಅಡಿಪಾಯ ಹಾಕಿದವರು ಶಿವಾಜಿ ಮಹಾರಾಜರು ಎನ್ನುವುದು ದಾಖಲಾರ್ಹ ಸಂಗತಿ. ಶಿವಾಜಿ ಮಹಾರಾಜರಲ್ಲಿದ್ದ ಹಿಂದುವೀ ಶಕ್ತಿಯನ್ನು ಗುರುತಿಸಿ ಅವರನ್ನು ಓರ್ವ ಸಮರ್ಥ ನಾಯಕನನ್ನಾಗಿ ರೂಪಿಸುವಲ್ಲಿ ಸಮರ್ಥ ರಾಮದಾಸರ ಪಾತ್ರ ಮಹತ್ವದ್ದಾಗಿದೆ. ಅವರ ಪಾದುಕೆ ನಮ್ಮ ಕಚೇರಿಗೆ ಆಗಮಿಸಿರುವುದು ಅತ್ಯಂತ ಸ್ಮರಣೀಯ ಎಂದು ಹೇಳಿದರು.
ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ ಮಾತನಾಡಿ, ಶಿವಾಜಿ ಮಹಾರಾಜರ ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ. ಸಮರ್ಥ ರಾಮದಾಸರ ಮಾರ್ಗದರ್ಶನದಲ್ಲಿ ಪಳಗಿದ ಶಿವಾಜಿ ಮಹಾರಾಜರು ತಮ್ಮ ಪರಾಕ್ರಮದ ಮೂಲಕ ನಾಡನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಶಿವಾಜಿ ಮಹಾರಾಜರನ್ನು ಬೆಳೆಸಿದ ಗುರು ಸಮರ್ಥ ರಾಮದಾಸರಂತಹ ಗುರು ಎಲ್ಲರಿಗೂ ಸಿಗಬೇಕು ಎಂದರು.
ಐ.ವಿ.ಹೆಗಡೆ, ಮಂಜುಗೌಡ, ಕಿರಣ್ ಗೌಡ, ಸುನೀಲ್ ರುದ್ರಪ್ಪ, ರೋಷನ್, ಸುಪ್ರತೀತ್, ಸುದರ್ಶನ್ ಇತರರಿದ್ದರು.