ನ್ಯೂಸ್

ನಾಳೆಯಿಂದ ಪಿಯುಸಿಗೆ ಯು-ಟ್ಯೂಬ್‌ ಕ್ಲಾಸ್‌: ಇಲ್ಲಿದೆ ಟೈಂ ಟೇಬಲ್‌

suchetana

ಬೆಂಗಳೂರು: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಈಗ ಆನ್‌ಲೈನ್‌ ಕ್ಲಾಸ್‌, ಟಿ.ವಿ ಮೂಲಕ ತರಬೇತಿ ಬಲು ಜೋರಾಗಿದೆ. ಇದಾಗಲೇ ಹೈಸ್ಕೂಲ್‌ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಸರ್ಕಾರ ತರಗತಿ ಶುರು ಮಾಡಿದೆ.

ಅದರ ಬೆನ್ನಲ್ಲೇ ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆಯಿಂದ (ಜು.23) ಯೂಟ್ಯೂಬ್‌ ಮೂಲಕ ಪ್ರೀ ರೆಕಾರ್ಡೆಡ್‌ ವಿಡಿಯೋ ತರಗತಿ ಆರಂಭಿಸಲಿದೆ.

‌‌ಒಂದು ವೇಳೆ ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಇಲ್ಲವೇ ಇಂಟರ್‌ನೆಟ್‌ ಇಲ್ಲದೇ ಇದ್ದರೆ ಅಂಥ ವಿದ್ಯಾರ್ಥಿಗಳು ಬೇಸರಪಡುವ ಅಥವಾ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಕಾಲೇಜು ಆರಂಭವಾದ ನಂತರ ಆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಇದೇ ಪಾಠಗಳನ್ನು ಉಪನ್ಯಾಸಕರು ಬೋಧನೆ ಮಾಡಲಿರುವುದಾಗಿ ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

ಕರೊನಾ ಸೋಂಕು ಪ್ರಕರಣಗಳು ಹರಡುತ್ತಿರುವುದರಿಂದ ಕಾಲೇಜು ಅರಂಭ ಸದ್ಯ ಸಾಧ್ಯವಿಲ್ಲ. ದ್ವಿತೀಯ ಪಿಯುಸಿ ತರಗತಿಗಳು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ ಯೂಟ್ಯೂಬ್‌ ತರಗತಿ ಆರಂಭಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ನೋಟ್ಸ್‌ಗಳನ್ನು ಸಿದ್ಧಪಡಿಸುವುದು ಆಯಾ ಕಾಲೇಜಿನ ಉಪನ್ಯಾಸಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ ಪ್ರತಿ ಕಾಲೇಜಿಗೂ ಶಿಕ್ಷಣ ಇಲಾಖೆಯಿಂದ ಕೆಲವೊಂದು ನಿರ್ದೇಶನಗಳನ್ನು ನೀಡಲಾಗಿದೆ. ಪ್ರತಿ ಕಾಲೇಜಿನ ಸಂಯೋಜಕರು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ವಿಡಿಯೋಗಳನ್ನು ತಲುಪಿಸುವ ಕೆಲಸ ಮಾಡುವುದು, ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕವೂ ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸುವುದು, ನಿಗದಿತ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ತಪ್ಪದೇ ತಲುಪಿಸುವುದು, ಒಂದು ಅವಧಿಯ ವಿಡಿಯೋ ತರಗತಿ ಮತ್ತು ನಂತರದ ತರಗತಿಗಳಲ್ಲಿ ವಿಡಿಯೋ ತರಗತಿಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ, ನೋಟ್ಸ್‌ ತಯಾರಿ, ಬರವಣಿಗೆ ಕೆಲಸಗಳನ್ನು ಮಾಡುವುದು... ಇತ್ಯಾದಿ ನಿರ್ದೇಶನ ನೀಡಲಾಗಿದೆ.

ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

ಪ್ರತಿ ದಿನ 45 ನಿಮಿಷಗಳ 4 ತರಗತಿಗಳು ನಡೆಯಲಿದೆ.

ಸಮಯ: ಪ್ರತಿದಿನ ಬೆಳಗ್ಗೆ 9ರಿಂದ 12. ಪ್ರತಿ 45 ನಿಮಿಷಗಳಿಗೊಮ್ಮೆ ಒಂದೊಂದು ತರಗತಿ (9- 9.45, 9.45-10.30, 10.30- 11.15, 11.15ರಿಂದ 12)

ಜುಲೈ 23:

ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್‌) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ /ರಾಜ್ಯಶಾಸ್ತ್ರ (ನೋಟ್ಸ್‌)

ಜುಲೈ 24:

ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ಜೀವಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌ (ನೋಟ್ಸ್‌) ಗಣಿತ/ಅರ್ಥಶಾಸ್ತ್ರ ಗಣಿತ/ಅರ್ಥಶಾಸ್ತ್ರ (ನೋಟ್ಸ್‌)

ಜುಲೈ 25:

ಗಣಿತ/ಇತಿಹಾಸ ಗಣಿತ/ಇತಿಹಾಸ (ನೋಟ್ಸ್‌) ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌

ಜುಲೈ 27:

ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌ ಕಂಪ್ಯೂಟರ್‌ ಸೈನ್ಸ್‌/ ಸಮಾಜಶಾಸ್ತ್ರ ನೋಟ್ಸ್‌

ಜುಲೈ 28:

ಬೇಸಿಕ್‌ ಮ್ಯಾಥ್‌್ಸ/ ಸಮಾಜಶಾಸ್ತ್ರ ನೋಟ್ಸ್‌ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌

ಜುಲೈ 29:

ಇಂಗ್ಲಿಷ್‌ ನೋಟ್ಸ್‌ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್‌

ಜು.30:

ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌

ಜುಲೈ 31:

ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ನೋಟ್ಸ್‌ ಗಣಿತ/ಅರ್ಥಶಾಸ್ತ್ರ ನೋಟ್ಸ್‌

ಆಗಸ್ಟ್‌ 1

ಗಣಿತ/ಇತಿಹಾಸ ನೋಟ್ಸ್‌ ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌

https://www.youtube.com/c/dpuedkpucpa ಲಿಂಕ್‌ ಅನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಇಲಾಖೆ ಹೇಳಿದೆ.