ವಿಶ್ವಕರ್ಮ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ ಸ್ವಚ್ಛತಾ ಹೀ ಸೇವಾ ಎಂಬ ಧ್ಯೇಯದೊಂದಿಗೆ ಉಡುಪಿಯಲ್ಲಿ ನಡೆದ 50ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಾಗೂ ಸಮಾರೋಪ ಕಾರ್ಯಕ್ರಮ ಉಡುಪಿಯ ದೊಡ್ಡಣಗುಡ್ಡೆ ಪರಿಸರದಲ್ಲಿ ನಡೆಯಿತು.
ಮಂಗಳೂರು: ಆರೋಗ್ಯಕರ ಪರಿಸರಕ್ಕಾಗಿ ವಿಶ್ವಕರ್ಮ ಬ್ಯಾಂಕ್ ನಿರಂತರವಾಗಿ ನಡೆಸುತ್ತಿರುವ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಇದು ಮತ್ತಷ್ಟು ಶ್ರಮದಾನ ಕಾರ್ಯಕ್ರಮಗಳನ್ನು ಆಯೋಜಿಸಲು ಮುಖ್ಯ ಪ್ರೇರಣೆಯಾಗಿದೆ ಎಂದು ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರು ಹೇಳಿದರು.
ವಿಶ್ವಕರ್ಮ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ ಸ್ವಚ್ಛತಾ ಹೀ ಸೇವಾ ಎಂಬ ಧ್ಯೇಯದೊಂದಿಗೆ ಉಡುಪಿಯಲ್ಲಿ ನಡೆದ 50ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿಯ ದೊಡ್ಡಣಗುಡ್ಡೆ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿಯ ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮವು ನಡೆಯಿತು.
ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡನಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಹಾಗೂ ಸದಸ್ಯರು, ಜೆಸಿಐ ದೊಡ್ಡನಗುಡ್ಡೆ ಪ್ರಕೃತಿ ಇದರ ಅಧ್ಯಕ್ಷ ಭರತ್ ಕುಮಾರ್ ಹಾಗೂ ಸರ್ವ ಸದಸ್ಯರು, ವಿಷ್ಣುಮೂರ್ತಿ ಮಹಿಳಾ ಮಂಡಳಿ ಇದರ ಅಧ್ಯಕ್ಷರಾದ ವಾರಿಜಾ ಹಾಗೂ ಸದಸ್ಯರು, ಉಡುಪಿ ಜಿಲ್ಲಾ ಕಾಪೆರ್ಂಟರ್ಸ್ ಯೂನಿಯನ್ ಇದರ ಕಾರ್ಯದರ್ಶಿ ಜಯಕರ ಬೈಲೂರು ಹಾಗೂ ಸದಸ್ಯರು, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸೇವಾ ಸಂಘ ಇದರ ಅಧ್ಯಕ್ಷ ವಿಶ್ವನಾಥ ಆಚಾರ್ಯ ಹಾಗೂ ಸದಸ್ಯರು, ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಸಂಘ ಇದರ ಅಧ್ಯಕ್ಷ ರವಿಚಂದ್ರ ಮಾರಾಳಿ ಹಾಗೂ ಸದಸ್ಯರು, ಮಾರ್ಷಲ್ ಫ್ರೆಂಡ್ಸ್ ಇದರ ಸದಸ್ಯರು, ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ಶಾಖಾಧಿಕಾರಿ ಸುದೇಶ್ ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು, ಹೆತೈಷಿಗಳು ಹಾಗೂ ಸ್ಥಳೀಯರು ಸ್ವಯಂ ಸೇವಕರಾಗಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.