ಬಸವನಬಾಗೇವಾಡಿ ಪಟ್ಟಣದ ನಂದಿ ಬಡಾವಣೆಯ ಆಂಜನೇಯ ದೇವಸ್ಥಾನದಲಿ ಬಸವನಬಾಗೇವಾಡಿ ಪೊಲೀಸ್ ಠಾಣೆ ನೂತನ ಸುರಕ್ಷತಾ ವ್ಯವಸ್ಥೆಯ ಲೋಕಾರ್ಪಣೆ ಲಾಕ್ ಹೌಸ್ ಬೀಟ್ ವ್ಯವಸ್ಥೆ ಕಾರ್ಯಕ್ರಮದಲ್ಲಿ ಪಿ.ಐ ಗುರುಶಾಂತ ದಾಶ್ಯಾಳ ಮಾತನಾಡಿದರು. ಕಲ್ಲನಗೌಡ ಪಾಟೀಲ, ಎಸ್.ಎ. ದೇಗಿನಾಳ, ರಾಜಶೇಖರ ಚಿಂಚೋಳಿ, ಮಹಾಂತೇಶ ಮನಗೂಳಿ ಮತ್ತಿತರರಿದ್ದರು. 
ನ್ಯೂಸ್

ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಮುಖ್ಯ

ಬಸವನಬಾಗೇವಾಡಿ: ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದ್ದರೆ ಕಳ್ಳತನಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಪಿ.ಐ. ಗುರಶಾಂತ ದ್ಯಾಶಾಳ ಹೇಳಿದರು.
ಪಟ್ಟಣದ ನಂದಿ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಪೊಲೀಸ್ ಠಾಣೆ ನೂತನ ಸುರಕ್ಷತಾ ವ್ಯವಸ್ಥೆಯ ಲೋಕಾರ್ಪಣೆ ಲಾಕ್ ಹೌಸ್ ಬೀಟ್ ವ್ಯವಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಅಂತ ಬೆಳೆ ಬಾಳು ವಸ್ತುಗಳು ಇದ್ದಲ್ಲಿ ಬ್ಯಾಂಕಿನ ಲಾಕರ್‌ಗಳಲ್ಲಿ ಇಡಬೇಕು. ಲಕ್ಷಾಂತರ ರೂ. ಖರ್ಚು ಮಾಡಿ ಮನೆ ಕಟ್ಟುತ್ತಿವೆ. ಹಬ್ಬ ಹರಿದಿನ, ಮದುವೆ ಇನ್ನಿತರ ಕಾರ್ಯಕ್ರಮ ಸಂದರ್ಭದಲ್ಲಿ ಲಕ್ಷಾಂತರ ಬೆಲೆ ಬಾಳುವ ಬೆಳ್ಳಿ, ಬಂಗಾರವನ್ನು ಮನೆಯಲ್ಲಿ ಇಡುತ್ತೇವೆ, ಅದರ ರಕ್ಷಣೆಗಾಗಿ ಕೇವಲ ಹತ್ತು ಹದಿನೈದು ಸಾವಿರ ಹಣದಲ್ಲಿ ಸಿಗುವ ಒಂದು ಸಿ.ಸಿ ಕ್ಯಾಮರಾವನ್ನು ಮನೆಗಳಿಗೆ ಅಳವಡಿಸಿದರೆ ಕಳ್ಳತನ ಪ್ರಕರಣ ತಡೆಯಲು ಸಹಕಾರಿಯಾಗುತ್ತದೆ. ಒಂದು ವೇಳೆ ಸಾರ್ವಜನಿಕ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ನಿರ್ಜನ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ತಾವು ಕೆಲಸದ ನಿಮಿತ್ತ ಬೇರೆ ಊರುಗಳಿಗೆ ತೆರಳುವ ಮುನ್ನ ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ನಮ್ಮ ಪೊಲೀಸರು ಅಂತ ಮನೆಗಳಿಗೆ ಹೆಚ್ಚಿನ ನಿಗಾ ವಹಿಸುತ್ತಾರೆ. ನಿರ್ಜನ ಪ್ರದೇಶದಲ್ಲಿರುವ ಮನೆಗಳು ಮತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಅಂತ ಮನೆಗಳ ಮೇಲೆ ಕಳ್ಳರು ಕಣ್ಣು ಹಾಕುತ್ತಾರೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಿಂದ ಬಿಡುಗಡೆಯಾದ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮನೆಯ ಜಿಪಿಎಸ್ ಲೊಕೇಶನ್ ಮನೆಯ ಪೊಟೋ ಅಪ್ಲೋಡ್ ಮಾಡಿ ನಮ್ಮ ತಂಡ ನಿಮ್ಮ ಮನೆ ಮೇಲೆ ನಿಗಾ ವಹಿಸುತ್ತದೆ ಎಂದು ಹೇಳಿದರು.
ಕಲ್ಲನಗೌಡ ಪಾಟೀಲ, ಎಸ್.ಎ. ದೇಗಿನಾಳ, ರಾಜಶೇಖರ ಚಿಂಚೋಳಿ, ಮಹಾಂತೇಶ ಮನಗೂಳಿ, ಮಹೇಶ್ ಮುಳವಾಡ, ಅಪು ಧನಶೆಟ್ಟಿ, ಚಿದಾನಂದ ಅಂಗಡಿ, ಅಶೋಕ ಬಿರಾದಾರ, ಅಶೋಕ ಡೊಮನಾಳ, ಮುರುಗೇಶ ಪೂಜಾರಿ, ಸುಭಾಷ ಭೂದಗೊಳಿ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ನಂದಿ ಬಡಾವಣೆಯ ಆಂಜನೇಯ ದೇವಸ್ಥಾನದಲಿ ಬಸವನಬಾಗೇವಾಡಿ ಪೊಲೀಸ್ ಠಾಣೆ ನೂತನ ಸುರಕ್ಷತಾ ವ್ಯವಸ್ಥೆಯ ಲೋಕಾರ್ಪಣೆ ಲಾಕ್ ಹೌಸ್ ಬೀಟ್ ವ್ಯವಸ್ಥೆ ಕಾರ್ಯಕ್ರಮದಲ್ಲಿ ಪಿ.ಐ ಗುರುಶಾಂತ ದಾಶ್ಯಾಳ ಮಾತನಾಡಿದರು. ಕಲ್ಲನಗೌಡ ಪಾಟೀಲ, ಎಸ್.ಎ. ದೇಗಿನಾಳ, ರಾಜಶೇಖರ ಚಿಂಚೋಳಿ, ಮಹಾಂತೇಶ ಮನಗೂಳಿ ಮತ್ತಿತರರಿದ್ದರು.