ನ್ಯೂಸ್

ಸಸ್ಯಹಾರ ಜನಜಾಗೃತಿ ಜಾಥಾ, ಉಚಿತ ಧ್ಯಾನ ಪ್ರಚಾರ ಸಮಾರಂಭ ನ. 2ರಂದು

ರಾಣೆಬೆನ್ನೂರ: ಪಿಎಸ್​ಎಸ್​ಐ ಭಾರತ ಮತ್ತು ಕರ್ನಾಟಕದ, ಬೆಂಗಳೂರಿನ ಅಖಂಡ ಕರ್ನಾಟಕ ಪಿರಮಿಡ್​ ಧ್ಯಾನ ಮಾಸ್ಟರ್​ ಹಾಗೂ ವಿವಿಧ ಸಂ&ಸಂಸ್ಥೆಗಳ ವತಿಯಿಂದ ಇಲ್ಲಿಯ ವಿದ್ಯಾನಗರದ ಅಂಬೇಡ್ಕರ್​ ಸ್ಕೂಲ್​ ಹತ್ತಿರದ ಶ್ರೀಗುರು ರಾವೇಂದ್ರ ಪಿರಮಿಡ್​ ಧ್ಯಾನ ಮಂದಿರದ ಪ್ರಥಮ ವಾಷಿರ್ಕೋತ್ಸವ ನಿಮಿತ್ತ ನ. 2ರಂದು ಸಸ್ಯಹಾರ ಜನಜಾಗೃತಿ ಜಾಥಾ, ಉಚಿತ ಧ್ಯಾನ ಪ್ರಚಾರ ಸಮಾರಂಭ ನಗರದಲ್ಲಿ ಜರುಗಲಿದೆ.

ಅಂದು ಬೆಳಗ್ಗೆ 8 ಗಂಟೆಗೆ ಇಲ್ಲಿಯ ವಿದ್ಯಾನಗರದ ಶ್ರೀಗುರು ರಾವೇಂದ್ರ ಪಿರಮಿಡ್​ ಧ್ಯಾನ ಮಂದಿರದಿಂದ ಸಸ್ಯಹಾರ ಜಾಥಾಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡುವರು. ಇಲ್ಲಿಂದ ಆರಂಭಗೊಂಡ ಜಾಥಾ ಬಸ್​ ನಿಲ್ದಾಣ ವೃತ್ತ, ಪೋಸ್ಟ್​ ವೃತ್ತ, ಎಂ.ಜಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಪಸ್​ ಧ್ಯಾನ ಮಂದಿರಕ್ಕೆ ಬಂದು ತಲುಪುವುದು.

ಮಧ್ಯಾಹ್ನ 12.15ಕ್ಕೆ ಶ್ರೀಗುರು ರಾವೇಂದ್ರ ಪಿರಮಿಡ್​ ಧ್ಯಾನ ಮಂದಿರದ ಪ್ರಥಮ ವಾಷಿರ್ಕೋತ್ಸವದ ಸಭಾ ಕಾರ್ಯಕ್ರಮ ಜರುಗುವುದು. ಸಾತೇನಹಳ್ಳಿ ಶಿವಾಲಿ ಬಸವೇಶ್ವರ ಮೂಕಪ್ಪ ಶಿವಯೋಗಿಗಳು, ಹಿಮಾಲಯದ ಸಂತ ಸದಾನಂದ ಗಿರಿ ಸ್ವಾಮೀಜಿ, ಮಡ್ಲೂರಿನ ಮರುಘಾಮಠದ ಮುರು ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಬ್ರಹ್ಮಷಿರ್ ಪ್ರೇಮ್​ನಾಥ ಗುಪ್ತ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಕೆಡಿಪಿಪಿ ಅಧ್ಯಕ್ಷ ಟಿ. ಹರಿಶಂಕರ, ವೈದ್ಯ ಡಾ. ಗೌತಮ ಲೋಡಾಯಿ, ಬೆಂಗಳೂರಿನ ಮಾಸ್ಟರ್​ ಆರತಿ ಮುತ್ತುರಾಜ, ಅಥಣಿ ಮಾಸ್ಟರ್​ ವಿಶಾಲಾ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಧ್ಯಾನದ ಕುರಿತು ಮಾಹಿತಿ ನೀಡಲಾಗುವುದು. ಸಮಾರಂಭದ ಬಳಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಧ್ಯಾನ ಮಂದಿರದ ನಿವೃತ್ತ ಶಿಕ್ಷಕ ಮೃತ್ಯುಂಜಯ ಗುಳೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.