Psycho Husband: ಹೊಸದಾಗಿ ವಿವಾಹವಾದ ನವ ವಧುವಿನ ಬಾಳಲ್ಲಿ ಘೋರ ಘಟನೆಯೊಂದು ನಡೆದಿದ್ದು, ಆಕೆ ಇದೀಗ ನೇಣಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ಹೌದು, ಮದವೆಯಾದ ಹೊಸತನ ಪ್ರಸ್ತದಲ್ಲಿ(ಫಸ್ಟ್ನೈಟ್) ಸೇರಿ ಇತರೆ ದಿನಗಳಲ್ಲಿ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಟಾರ್ಚರ್ ಮಾಡುತ್ತಿದ್ದ ಹಿನ್ನೆಲೆ ಮನನೊಂದು ಸಾವಿನ ಕದ ತಟ್ಟಿದ್ದಾಳೆ. ಈ ಘಟನೆ ಆಂಧ್ರದ ವಿಶಾಖಪಟ್ನಂನ ಗೋಪಾಲಪುರಿಪಟ್ನಂನಲ್ಲಿ ನಡೆದಿದೆ.
ಆರೋಪಿ ನಾಗೇಂದ್ರಬಾಬು ಎಂದು ಗುರುತಿಸಲಾಗಿದ್ದು, ಇತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತಿ ನಾಗೇಂದ್ರಬಾಬು ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಟಾರ್ಚರ್ ಮಾಡುತ್ತಿದ್ದಾನೆ ಎಂದು ಆಕೆ ತನ್ನ ಕುಟುಂಬಸ್ಥರ ಜತೆ ಆಳಲು ತೊಡಿಕೊಂಡಿದ್ದಳು. ಈ ಕುರಿತಾಗಿ ನಾಗೇಂದ್ರಬಾಬು ಜತೆ ಮಾತನಾಡುವುದಾಗಿ ಹೇಳಿದ್ದರು. ಆದರೆ, ಇಷ್ಟರಲ್ಲೇ ಈ ಘಟನೆ ನಡೆದೋಗಿದೆ. ನಮ್ಮ ಪುತ್ರಿಯನ್ನು ನಾಗೇಂದ್ರಬಾಬು ಟಾರ್ಚರ್ ಮಾಡಿ ಕೊಲೆ ಮಾಡಿದ್ದಾನೆ ಎಂದು ಮೃತೆ ಕುಟುಂಬಸ್ಥರು ಆರೋಪಿಸಿದ್ದಾರೆ.(ಏಜೆನ್ಸೀಸ್)