ನ್ಯೂಸ್

ವಿಕಲ ಚೇತನರ ವೈದ್ಯಕಿಯ ತಪಾಸಣೆ; ಜು.1ರಂದು ಕೆಇಎ ಕಚೇರಿಯಲ್ಲಿ ಆಯೋಜನೆ

Bengaluru - General - Rama Kishan K V

ಬೆಂಗಳೂರು: ಡಿಸಿಇಟಿ-24ರಲ್ಲಿ ರ್ಯಾಂಕ್​ ಪಡೆದಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಅಂಗವಿಕಲತೆಯ ಅರ್ಹತೆಯನ್ನು ಪರೀಸಲು ಜುಲೈ 1ರಂದು ನಗರದ ಕೆಇಎ ಕಚೇರಿಯಲ್ಲಿ ವೈದ್ಯಕಿಯ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್​.ಪ್ರಸನ್ನ ತಿಳಿಸಿದ್ದಾರೆ.

ಯುಜಿಸಿಇಟಿ-24ಕ್ಕೆ ಸಂಬಂಧಿಸಿದಂತೆ ಜೂನ್​ 10ರಿಂದ 12ರವರೆಗೆ ನಡೆದ ವೈದ್ಯಕಿಯ ತಪಾಸಣೆಗೆ ಗೈರುಹಾಜರಾದ ವಿಕಲಚೇತನ ಅಭ್ಯರ್ಥಿಗಳು ಕೂಡ ಜುಲೈ 1ರಂದು ತಪಾಸಣೆಗೆ ಬರಬಹುದು. ಈ ಮೊದಲು ತಪಾಸಣೆಗೆ ಹಾಜರಾಗಿದ್ದವರು ಪುನ@ ತಪಾಸಣೆಗೆ ಬರುವಂತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಡಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕಿಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು ಎಂದು ಅವರು ತಿಳಿಸಿದ್ದಾರೆ.