ಮುಂಬೈ: ಸರ್ಕಾರಿ ಕಂಪನಿಯಾದ (ಪಿಎಸ್ಯು) ಇಂಡಿಯನ್ ರಿನ್ಯೂವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ (NSEBSE
Indian Renewable Energy Development Agency Ltd. ಐಆರ್‌ಇಡಿಎ- ಇರೇಡಾ) ಷೇರುಗಳ ಬೆಲೆಯಲ್ಲಿ ಸೋಮವಾರ ತೀವ್ರ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳ ಬೆಲೆ ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇ. 11ರಷ್ಟು ಏರಿಕೆಯಾಗಿ 179 ರೂ. ತಲುಪಿದವು.
ಶುಕ್ರವಾರ ಬಿಡುಗಡೆಯಾದ ಕಂಪನಿಯ ಬಲವಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಷೇರುಗಳ ಬೆಲೆಗಳಲ್ಲಿ ಈ ಏರಿಕೆ ಕಂಡುಬಂದಿದೆ.
ಇರೇಡಾ ನಿವ್ವಳ ಲಾಭವು ಹಣಕಾಸು ವರ್ಷದ 2023-24 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 33ರಷ್ಟು ಏರಿಕೆಯಾಗಿ 337.37 ಕೋಟಿ ರೂ.ಗಳಿಗೆ ತಲುಪಿದೆ, ಬಲವಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಖರೀದಿಗೆ ಮುಗಿಬಿದ್ದರು. ಕಂಪನಿಯ ಲಾಭವು ಮುಖ್ಯವಾಗಿ ಆದಾಯದ ಹೆಚ್ಚಳದಿಂದ ಹೆಚ್ಚಾಗಿದೆ. 2022-23ರ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಈ ಕಂಪನಿಯು 253.61 ಕೋಟಿ ರೂಪಾಯಿ ಗಳಿಸಿದೆ ಎಂದು ಷೇರು ಮಾರುಕಟ್ಟೆಗೆ ನೀಡಿರುವ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ.
2023-24 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು 1,391.63 ಕೋಟಿ ರೂ. ಮುಟ್ಟಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯವು 1,036.31 ಕೋಟಿ ರೂ. ಇತ್ತು.
ಪರಿಶೀಲನೆಯ ಅವಧಿಯಲ್ಲಿ ಕಂಪನಿಯ ವೆಚ್ಚಗಳು 911.96 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಇದು 747.93 ಕೋಟಿ ರೂ. ಇತ್ತು.
50 ದಿನಗಳಲ್ಲಿ 7x ರಿಟರ್ನ್ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು
ಇರೇಡಾ ಷೇರು 2023 ರ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸಿತು. ಆಗ ಕಂಪನಿಯ ಐಪಿಒ ಷೇರು ಬೆಲೆ 32 ರೂ. ಇತ್ತು. ಕೇವಲ 50 ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 214 ರೂ. ತಲುಪಿತು. ಅಂದರೆ ಐಪಿಒ ಷೇರು ಬೆಲೆಗಿಂತ 7 ಪಟ್ಟು ಹೆಚ್ಚಾಗಿದೆ.