ಬೆಂಗಳೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಲಿಮಿಟೆಡ್(ಜೆಎಲ್‌ಆರ್‌ಎಲ್) ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಖಾಸಗಿ ರೆಸಾರ್ಟ್ ಅತಿಥಿಗಳಿಗೆ ಕ್ಯಾಂಟರ್‌ಗಳನ್ನು ಒದಗಿಸಲಾಗುತ್ತಿದೆ. ಆದರೆ, ಜೆ.ಎಲ್.ಆರ್. ಎಲ್‌ಗೆ ಅತಿಥಿ ಗೃಹಗಳಿಗೆ ಬರುವ ಪ್ರವಾಸಿಗರಿಗೆ ಸಫಾರಿಗೆ ಸೂಕ್ತವಾಗಿರುವ ಜೀಪ್‌ಗಳನ್ನು ಒದಗಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ರೆಸಾರ್ಟ್‌ಗಳ ಸಂಘ 2022ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ಅವರ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಈ ವೇಳೆ ಅರ್ಜಿದಾರರ ಪರ ವಕೀಲರು, ಸಫಾರಿ ವಾಹನ ಸೌಲಭ್ಯ ಒದಗಿಸುವುದು ಮತ್ತು ಇತರೆ ಸೌಲಭ್ಯಗಳ ಕುರಿತಂತೆ ಸರ್ಕಾರದೊಂದಿಗೆ ಖಾಸಗಿ ರೆಸಾರ್ಟ್‌ಗಳ ಸಂಘ ಒಪ್ಪಂದ ಮಾಡಿಕೊಂಡಿದೆ. ಆದರೆ, ಜೆ.ಎಲ್.ಆರ್.ಎಲ್ ಒಪ್ಪಂದವನ್ನು ಉಲ್ಲಂಘಿಸುತ್ತಿದೆ.
ಸಫಾರಿ ವಾಹನಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹೊಸ ರೆಸಾರ್ಟ್‌ಗಳಿಗೆ ಹೊಸ ಸಫಾರಿ ಅನುಮತಿಗಳನ್ನು ನೀಡಲಾಗಿದೆ.
ಅಲ್ಲದೆ, ಸಫಾರಿ ವಾಹನಗಳ ನ್ಯಾಯಯುತ ಹಂಚಿಕೆ ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ವಿಸ್ತರಿಸಲು ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಜೆ.ಎಲ್.ಆರ್.ಎಲ್ ಅತಿಥಿಗಳಿಗೆ ವನ್ಯಜೀವಿಗಳ ಉತ್ತಮ ವೀಕ್ಷಣೆ ಇರುವ ವಲಯಗಳಲ್ಲಿ ಮಾರ್ಗಗಳಲ್ಲಿ ಸಪಾರಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಿದ್ದಾರೆ. ಆದರೆ, ಖಾಸಗಿ ರೆಸಾರ್ಟ್‌ಗಳು ಅತಿಥಿಗಳಿಗೆ ಈ ಸೌಲಭ್ಯದಿಂದ ವಂಚಿಸುತ್ತಿದ್ದಾರೆ. ಆದ್ದರಿಂದ ಖಾಸಗಿಯವರೆಗೂ ಸಮಾನ ಅವಕಾಶ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಕೋರಿದರು.