ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ರಕ್ಷಾಬಂಧನದ ನಿಮಿತ್ತ ಟ್ವಿಟರ್ನಲ್ಲಿ ತಮ್ಮ ಸೋದರ ರಾಹುಲ್ ಗಾಂಧಿಯವರ ಬಗ್ಗೆ ಭಾವನಾತ್ಮಕವಾದ ಪೋಸ್ಟ್ ಹಾಕಿದ್ದಾರೆ. ರಾಹುಲ್ ಗಾಂಧಿಯಂತಹ ಅಣ್ಣನನ್ನು ಪಡೆದಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ತಾವು ರಾಹುಲ್ ಗಾಂಧಿಯವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ನಾನು ಪ್ರೀತಿ, ಸತ್ಯ, ತಾಳ್ಮೆಯನ್ನು ನನ್ನ ಸಹೋದರನಿಂದ ಕಲಿತಿದ್ದೇನೆ. ಪ್ರತಿ ಸಂತೋಷ ಮತ್ತು ದುಃಖದಲ್ಲಿ ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಈ ದೇಶದ ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಕೂಡ ತಾವು ಪ್ರಿಯಾಂಕಾ ಗಾಂಧಿಯವರನ್ನು ಅಪ್ಪಿಕೊಂಡಿರುವ ಫೋಟೋ ಹಾಕಿ, ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದಿದ್ದರು. (ಏಜೆನ್ಸೀಸ್)