ಮತ್ತಿಮನೆಯಲ್ಲಿ ಮೊಬೈಲ್ ನೆಟ್‌ವಕ್ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದರು. ಕುಮಾರ್, ಸ್ವಾಮಿ, ಕೃಷ್ಣ, ಗೋಪಾಲ್, ಚಂದ್ರಪ್ಪ, ಅಪು ್ಪಭಟ್, ಕಿಶೋರ್, ಸುಕೇಶ್ ಇತರರಿದ್ದರು.  
ನ್ಯೂಸ್

ನೆಟ್‌ವರ್ಕ್‌ಗಾಗಿ ಟವರ್ ಮೇಲೆ ಪ್ರತಿಭಟನೆ

ಶಿವಕುಮಾರ ಎಸ್.ಪಿ.

ಹೊಸನಗರ: ತಾಲೂಕಿನ ಮತ್ತಿಮನೆ, ನಗರ, ಸಂಪೇಕಟ್ಟೆ, ನಿಟ್ಟೂರು ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ಟವರ್ ಏರಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಮತ್ತಿಮನೆ ಗ್ರಾಪಂ ಹಿಂಭಾಗದ ಬಿಎಸ್‌ಎನ್‌ಎಲ್ ಟವರ್ ಸಮೀಪ ಜಮಾಯಿಸಿದ ಸಾರ್ವಜನಿಕರು ಸಮಸ್ಯೆ ಬಗ್ಗೆ ನಿರ್ಲಕ್ಷೃ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕುಮಾರ್ ಹಿಲ್ಕುಂಜಿ, ಅಡಗೋಡಿ ಸ್ವಾಮಿ, ತರುವೆ ಕೃಷ್ಣ ಮತ್ತಿತರರು ಟವರ್ ಏರಿ ಪ್ರತಿಭಟಿಸಿದರು. ಸಮಸ್ಯೆ ಬಗೆಹರಿಯುವ ತನಕ ಕೆಳಗಿಳಿಯುವುದಿಲ್ಲ ಎಂದು ಪಟ್ಟುಹಿಡಿದರು.
ಸಂಪೇಕಟ್ಟೆ ನಿವಾಸಿ ಮೋಹನ ಶೆಟ್ಟಿ ಮಾತನಾಡಿ, ಹಲವು ವರ್ಷಗಳಿಂದ ಮೊಬೈಲ್ ಟವರ್ ಇದ್ದರೂ ನೆಟ್‌ವರ್ಕ್ ಸಮಸ್ಯೆ ಸರಿಪಡಿಸುತ್ತಿಲ್ಲ. ವಿದ್ಯುತ್ ಹೋಗುತ್ತಿದ್ದಂತೆ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇರಲ್ಲ. ಹಾಳಾಗಿರುವ ವಿದ್ಯುತ್ ಜನರೇಟರ್ ದುರಸ್ತಿ ಮಾಡಿಸಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದರೆ ಉಪಯೋಗವಿಲ್ಲ. ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ಆದರೆ ಅವರು ಟವರ್ ಬಳಿ ಬರುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಬಿಎಸ್‌ಎನ್‌ಎಲ್ ಜೆಟಿಒ ಹರೀಶ್, ಸಂತೋಷ್, ಶರತ್, ನಗರ ಠಾಣೆ ಪಿಎಸ್‌ಐ ರಮೇಶ್ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆರೋಪಗಳ ಸುರಿಮಳೆಗೈದರು. ಕೆಲಹೊತ್ತು ಮಾತಿನ ಚಕಮಕಿಯೂ ನಡೆಯಿತು. ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಪಿಎಸ್‌ಐ ರಮೇಶ್ ಮಾಹಿತಿ ಪಡೆದರು.
ದಿನದ 24 ತಾಸು ಮೊಬೈಲ್ ನೆಟ್‌ವರ್ಕ್ ಸಿಗಬೇಕು. ವಿದ್ಯುತ್ ಇಲ್ಲದಿದ್ದರೂ ಜನರೇಟರ್ ಮೂಲಕ ನೆಟ್‌ವರ್ಕ್ ಇರುವಂತೆ ಕ್ರಮ ಕೈಗೊಳ್ಳಲು ಪಟ್ಟುಹಿಡಿದರು. ಇದಕ್ಕೆ ಅಧಿಕಾರಿಗಳು 6 ದಿನದ ಕಾಲಾವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಟವರ್‌ನಿಂದ ಇಳದರು. ಒಂದು ವೇಳೆ ಮಾತು ತಪ್ಪಿದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಅರಮನೆಕೊಪ್ಪ ಗೋಪಾಲ್, ಕೊಡಸೆ ಚಂದ್ರಪ್ಪ, ಅಪು ್ಪಭಟ್, ಕಿಶೋರ್, ಸುಕೇಶ್, ಟಿ.ಡಿ ಗಣಪತಿ, ರವೀಂದ್ರ ಮತ್ತಿಮನೆ, ಪ್ರಶಾಂತ ಸಂಪೇಕಟ್ಟೆ, ವೆಂಕಟರಮಣ ಭಟ್, ಶ್ರೀನಿವಾಸ, ಆದಿತ್ಯ ಇತರರಿದ್ದರು.