ನ್ಯೂಸ್

ಗ್ರಾಪಂ ಐದು ವೃಂದ ನೌಕರರಿಂದ ಅ.4 ರಂದು ಪ್ರತಿಭಟನೆ

ಬೆಂಗಳೂರು: ಸೇವಾ ಹಿರಿತನದ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರು ಅ.4 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಐದು ವೃಂದದ ನೌಕರರ ಬೇಡಿಕೆ ಈಡೇರಿಕೆ ಕುರಿತು ಚರ್ಚಿಸಲು ಮಂಗಳವಾರ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರೆದ ಸಭೆಗೂ ನೌಕರರು ಗೈರು ಹಾಜರಾಗುವ ಮೂಲಕ ತಮ್ಮ ಪ್ರತಿಭಟನೆ ನಿರ್ಧಾರ ಅಚಲ ಎಂಬ ಸಂದೇಶ ರವಾನಿಸಿದ್ದಾರೆ. ಕ್ಲರ್ಕ್ ಕಂ-ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರುಗಂಟಿ, ಜವಾನ ಮತ್ತು ಸ್ವಚ್ಚತಗಾರರು ಅ.4 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಬದಲಾಗಿ ಇಲಾಖೆಯಿಂದ ವೇತನ ನಿಗದಿಪಡಿಸಿ ಹಾಗೂ ಸೇವಾ ಹಿರಿತನ ವೇತನ ಜಾರಿ ಮಾಡುವ ದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯೂ ಫಬ್ರವರಿ-2024 ರಲ್ಲಿ ತನ್ನ ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದೆ. ಈ ವರದಿ ಅನುಮೋದನೆಗೆ ಪಂಚ ವೃಂದ ನೌಕರರ ಸಮಿತಿ ಗ್ರಾಮೀಣಾಭಿವೃಧ್ಧಿ ಇಲಾಖೆ ಮಂತ್ರಿಗಳಾದಿಯಾಗಿ ಪ್ರಮುಖರಿಂದ ಎಷ್ಟೇ ಒತ್ತಡ ತಂದರೂ ಪ್ರಯೋಜನವಾಗಿಲ್ಲ ಎಂದು ಸಂಘ ಹೇಳಿದೆ.

ನೌಕರರ ಬೇಡಿಕೆಗಳು ಏನೇನು?:

-ಸೇವಾ ಹಿರಿತನ ವೇತನ ಮತ್ತು ವೇತನ ಹಚ್ಚಳ ಮಾಡಬೇಕು.

-ಕನಿಷ್ಟ ವೇತನ ರದ್ದುಪಡಿಸಿ, ಮಾತೃ ಇಲಾಖೆಯಿಂದಲೇ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಿ ವೇತನ ಶ್ರೇಣಿ ಜಾರಿ ಮಾಡಬೇಕು.

-ಕರವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಮತ್ತು

ಸ್ವಚ್ಚತೆಗಾರರು ಪದನ್ನೋತಿ ಸಿಗದೇ ಕೊನೆಯ 5 ವರ್ಷಗಳ ನಿವೃತ್ತಿ ಹಂತದಲ್ಲಿರುವ

ಸಂಧರ್ಭದಲ್ಲಿ ಗ್ರೇಡ್-2 ಕಾರ್ಯದರ್ಶಿ ಸಮಾನಂತರ ವೇತನ ಶ್ರೇಣಿ ನಿಗದಿ ಮಾಡಬೇಕು.

-ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ದ್ವೀತಿಯ ದರ್ಜಿ ಲೆಕ್ಕ ಸಹಾಯಕ

ಹುದ್ದೆ ಮಂಜೂರು ಮಾಡಬೇಕು.

-ಕ್ಲರ್ಕ್/ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಜೊತೆಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ(ಈ ಹಿಂದಿನ ಕಾರ್ಯನಿರ್ವಹಿಸುತ್ತಿರುವ ಹಾಗೂ

ಪ್ರಸ್ತುತ ಹೆಚ್ಚುವರಿ ಡಿಇಒ) ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಒಂದು ಬಾರಿಗೆ

ಅನುಮೋದನೆ ನೀಡಬೇಕು.

-ಕರವಸೂಲಿಗಾರರ ಜೊತೆಯಲ್ಲಿ ಇನ್ನೂಬ್ಬ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕರವಸೂಲಿಗಾರ, ನೀರುಗಂಟಿ, ಜವಾನ, ಸ್ವಚ್ಚತೆಗಾರರ ಏಕಕಾಲಕ್ಕೆ ಅನುಮೋದನೆ ನೀಡಬೇಕು.

-60 ತಿಂಗಳ ವೇತನವನ್ನು ನಿವೃತ್ತಿ ಉಪಧನವನ್ನಾಗಿ ಇಲಾಖೆಯಿಂದ ನೀಡಬೇಕು.