ಚನ್ನಪಟ್ಟಣ : ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್ನಲ್ಲಿ ಸೂಕ್ತ ವ್ಯವಸ್ಥೆ ಮತ್ತು ಚಿಕಿತ್ಸೆಗಾಗಿ ಕೋವಿಡ್ ಸೋಂಕಿತರು ಪ್ರತಿಭಟನೆ ಆರಂಭಿಸಿದ್ದಾರೆ.
ಹೊನ್ನನಾಯಕನಹಳ್ಳಿ ಸೆಂಟರ್ನಲ್ಲಿ ಸೂಕ್ತ ಚಿಕಿತ್ಸೆ ಇಲ್ಲ. ಕುಡಿಯೋ ನೀರಿನ ವ್ಯವಸ್ಥೆ ಇಲ್ಲ ಎಂದು ಆರೋಪಿಸುತ್ತಿರುವ ಸೋಂಕಿತರು, ಪ್ರಮುಖವಾಗಿ ಸ್ವಚ್ಛತೆಯೇ ಇಲ್ಲ ಎಂದು ಗಲಾಟೆ ಶುರು ಮಾಡಿದ್ದಾರೆ. ಕೋವಿಡ್ ಸೆಂಟರ್ ಆವರಣದ ಒಳಗಡೆಯೇ ಬೆಳಗಿನ ಉಪಹಾರವನ್ನು ಸೇವಿಸದೆ ಪ್ರತಿಭಟನೆ ಮಾಡುತ್ತಿರುವ ಸೋಂಕಿತರು, ಸೆಂಟರ್ನ ಸಿಬ್ಬಂದಿಗಳು ಮತ್ತು ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
150 ಕ್ಕೂ ಹೆಚ್ಚು ಸೋಂಕಿತರಿರುವ ಕೇರ್ ಸೆಂಟರ್ನಲ್ಲಿ ಈ ಗಲಾಟೆ ನಡೆಯುತ್ತಿದೆ. ಪ್ರತಿಭಟನಾಕಾರರು ಸ್ಥಳಕ್ಕೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬರಲಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.