ಜಿಲ್ಲಾ ವಕ್ಫ್ ಕಚೇರಿ ಎಫ್‌ಡಿಎ ಮೆಹತಾಬ್ ವರ್ಗಾವಣೆಗೆ ಆಗ್ರಹಿಸಿ ರಹಮತ್‌ಉಲ್ಲಾ ರೆಹಮತಿ, ಮೊಹಮ್ಮದ್, ಮೊಹಮ್ಮದ್ ಆರೀಫ್, ಅಬ್ದುಲ್ ಮುಜೀಬ್, ಶರೀಫ್ ಮುಂತಾದವರು ಪ್ರತಿಭಟನೆ ನಡೆಸಿದರು. 
ನ್ಯೂಸ್

ವಕ್ಫ್ ಅಧಿಕಾರಿ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಜಿಲ್ಲಾ ವಕ್ಫ್ ಕಚೇರಿಯಲ್ಲಿ ಕಾಯಂ ಜಿಲ್ಲಾ ವಕ್ಫ್ ಅಧಿಕಾರಿಯಿಲ್ಲದ ಕಾರಣ ಎಫ್‌ಡಿಎ ಮೆಹತಾಬ್ ಅವರನ್ನು ಹಂಗಾಮಿ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಆದರೆ ಇವರು ಯಾರಿಗೂ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುತ್ತಿಲ್ಲ ಎಂದು ಮುಸ್ಲಿಂ ಸಮಾಜದ ಹಲವರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಅಧಿಕಾರಿ ತನ್ನ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ಜನರೊಂದಿಗೆ ಉದ್ಧಟನದಿಂದ ನಡೆದುಕೊಳ್ಳುತ್ತಿದ್ದಾರೆ. ವಕ್ಫ್ ಸಂಸ್ಥೆ ಬಗ್ಗೆಯೇ ಜನರಿಗೆ ಅಪನಂಬಿಕೆ ಹುಟ್ಟುವಂತಾಗಿದೆ. ಕೂಡಲೇ ಇವರನ್ನು ವರ್ಗಾವಣೆ ಮಾಡಿ ಕಾಯಂ ಜಿಲ್ಲಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ವಕ್ಫ್ ಮಂಡಳಿ ಮಾಜಿ ಉಪಾಧ್ಯಕ್ಷ ರಹಮತ್ ಉಲ್ಲಾ ರೆಹಮತಿ, ಮುಸ್ಲಿಂ ಹಾಸ್ಟೆಲ್ ಮಾಜಿ ಅಧ್ಯಕ್ಷ ಮೊಹಮ್ಮದ್ ಆರೀಫ್ ವುಲ್ಲಾ, ಪ್ರಮುಖರಾದ ಮೊಹಮ್ಮದ್, ಸಲೀಂ, ನಾಸೀರ್ ಅಹಮ್ಮದ್, ಅಬ್ದುಲ್ ಮುಜೀಬ್, ಶಮನ್, ಶರೀಫ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.