ಪಾಲಿಕೆಯ ದಸರಾ ಆಚರಣೆ ಸಂಬಂಧ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸಿ ಸಲಹೆ ಪಡೆಯುವಂತೆ ಒತ್ತಾಯಿಸಿ ಕನ್ನಡಿಗರ ರಕ್ಷಣಾ ವೇದಿಕೆಯ ಜಾವಳ್ಳಿ ಚಂದ್ರು, ಮಂಜುನಾಥ್, ಆಕಾಶ್, ಪ್ರದೀಪ್, ಕಿಶೋರ್, ಮಂಜುನಾಥ್ ಮುಂತಾದವರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ದಸರಾಕ್ಕೆ ಸಲಹೆ ಸ್ವೀಕರಿಸಲು ಆಗ್ರಹಿಸಿ ಪ್ರತಿಭಟನೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಗರ ಪಾಲಿಕೆಯಿಂದ ಆಚರಿಸುವ ದಸರಾ ಉತ್ಸವಕ್ಕೆ ಎಲ್ಲ ಕನ್ನಡಪರ ಸಂಘಟನೆಗಳನ್ನೂ ಆಹ್ವಾನಿಸಬೇಕೆಂದು ಒತ್ತಾಯಿಸಿ ಕನ್ನಡಿಗರ ರಕ್ಷಣಾ ವೇದಿಕೆ ಪ್ರಮುಖರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ. ಅಧಿಕಾರಿಗಳೇ ಎಲ್ಲವನ್ನೂ ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸಿ ಅವರಿಂದ ಸಲಹೆಗಳನ್ನು ಪಡೆದು ದಸರಾವನ್ನು ಯಶಸ್ವಿಯಾಗಿ ನಡೆಸಬೇಕೆಂದು ಒತ್ತಾಯಿಸಿದರು.
ದಸರಾ ಆಚರಣೆ ಕೇವಲ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರ ಹಬ್ಬವಾಗಬಾರದು. ನಾಡಹಬ್ಬವನ್ನು ನಾಗರಿಕರ ಆಶಯಕ್ಕೆ ತಕ್ಕಂತೆ ನಡೆಸಬೇಕು. ಹಣವನ್ನು ಮನಬಂದಂತೆ ಖರ್ಚು ಮಾಡದೇ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ಜಾವಳ್ಳಿ ಚಂದ್ರು, ಪ್ರಮುಖರಾದ ಪ್ರದೀಪ್, ಮಂಜುನಾಥ್, ಅನಿಲ್‌ಕುಮಾರ್, ಆಕಾಶ್, ಕಿಶೋರ್, ಶ್ರೀನಿವಾಸ್, ದಾನಪ್ಪ ಮುತಾದವರು ಈ ಸಂದರ್ಭದಲ್ಲಿದ್ದರು.