ಚನ್ನರಾಯಪಟ್ಟಣ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ ವಿವಿಧ ಮುಸ್ಲಿಂ ಸಂಘಟನೆಗಳ ಸದಸ್ಯರು ಶನಿವಾರ ತಹಸೀಲ್ದಾರ್ ವಿ.ಎಸ್.ನವೀನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕೆ.ಆರ್. ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಅಲ್ವೇತೆ ಮಿಲಾದ್ ಕಮಿಟಿಯ ಅದ್ಯಕ್ಷ ಝಬಿವುಲ್ಲಾ ಬೇಗ್ ಮಾತನಾಡಿ, ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಕೃತ್ಯ ಖಂಡನಾರ್ಹ. ದೇಶವಿರೋಧಿ ಚಟುವಟಿಕೆ ನಡೆಸುವ ಯಾವುದೇ ಸಂಘಟನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಭಯೋತ್ಪಾದಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಫರ್ಹಾಅನ್ನು, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಸದಸ್ಯ ಸಾಯಿದ್ ಅಹಮದ್, ಕರ್ನಾಟಕ ದಲಿತ ಸಮನ್ವಯ ಸಮಿತಿಯ (ಮನುಜಮತ) ಜಿಲ್ಲಾ ಸಂಚಾಲಕ ಗೋವಿಂದರಾಜು, ಸಮಾಜ ಸೇವಕ ಸಿ.ಟಿ.ಕುಮಾರಸ್ವಾಮಿ, ಮುಸ್ಲಿಂ ಮುಖಂಡರಾದ ಜಾವಿದ್ ಪಾಷ, ಅಬ್ದುಲ್ ಬಸೀದ್, ಅದಿಲ್, ಬಾಬು, ಇಮ್ರಾನ್, ಮನ್ಸೂರ್, ದಾದಾಪೀರ್, ಚಾಂದ್‌ಪಾಷ, ಸಮೀರ್, ಅಮ್ಮದ್ ಖಾನ್ , ಮಮ್ಮದಿ, ಮುಜಾಮಿಲ್ ಐಟಿಐ, ಆದಿಲ್, ಉಪ್ರಾನ್, ತಂಜಿಮ್, ಬಾಬು, ಇಮ್ರಾನ್, ಸಿದ್ದು, ಮನ್ಸೂರ್, ಇಲ್ಯಾಜ್, ಸದ್ದಾಂ, ಅಜಾಮ್, ಸಮೀ ರಾಜಾ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.